ಗುರುವಾರ , ಏಪ್ರಿಲ್ 9, 2020
19 °C

ಸ್ಪೇನ್‌ ಪ್ರಧಾನಿ ಪತ್ನಿಗೆ ಕೊರೊನಾ ವೈರಸ್ ಸೋಂಕು

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

pain's Prime Minister Pedro Sanchez and his wife Begona Sanchez

 ಮ್ಯಾಡ್ರಿಡ್: ಸ್ಪೇನ್‌ನಲ್ಲಿ ಕೊರೊನಾ ವೈರಸ್ ಸೋಂಕು ಹಬ್ಬಿದ್ದು ಇಲ್ಲಿನ ಪ್ರಧಾನಿ ಪೆಡ್ರೊ ಸಾನ್‌ಚೆಝ್ ಅವರ ಪತ್ನಿ ಬೆಗೊನಾ ಗೊಮೇಜ್ ಅವರಿಗೂ ಕೋವಿಡ್-19 ಇರುವುದಾಗಿ ತಿಳಿದುಬಂದಿದೆ.

 ಮುನ್ನೆಚ್ಚರಿಕೆ ಕ್ರಮವಾಗಿ ಜನರು ಮನೆಯೊಳಗೇ ಇರುವಂತೆ ಸೂಚಿಸಿದ್ದು, ನೌಕರಿಗೆ ಹೋಗುವವರು,  ಆಹಾರ ಅಥವಾ ಔಷಧಿ ಖರೀದಿಗೆ ಮಾತ್ರ ಜನರು ಹೊರಗೆ ಹೋದರೆ ಸಾಕು ಎಂದು ಸ್ಪೇನ್ ಸರ್ಕಾರ ಹೇಳಿದೆ.
 ಶನಿವಾರ ಸ್ಪೇನ್ ದೇಶದಾದ್ಯಂದ 15 ದಿನಗಳ ತುರ್ತುಪರಿಸ್ಥಿತಿ ಘೋಷಿಸಲಾಗಿದೆ.

ಇದನ್ನೂ ಓದಿ: ಕೋವಿಡ್‌ ಮಹಾಮಾರಿಗೆ ಇನ್ನಷ್ಟು ಮಂದಿ ಬಲಿ: ಅಮೆರಿಕದಲ್ಲಿ ತುರ್ತು ಪರಿಸ್ಥಿತಿ

 ಶುಕ್ರವಾರ ಸಂಜೆವರೆಗೆ ಸ್ಪೇನ್‌ನಲ್ಲಿ ಹೊಸದಾಗಿ 1,500 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ  5,753ಕ್ಕೇರಿದ್ದು ಯುರೋಪ್ ರಾಷ್ಟ್ರಗಳಲ್ಲಿ ಇಟಲಿ ಬಳಿಕ ಅತೀ ಹೆಚ್ಚು ಪ್ರಕರಣ ಪತ್ತೆಯಾಗಿರುವ ರಾಷ್ಟ್ರವಾಗಿದೆ ಇದು. ಇಲ್ಲಿಯವರೆಗೆ 183 ಮಂದಿ ಸಾವಿಗೀಡಾಗಿದ್ದಾರೆ.

ಗುಂಪು ಸೇರುವುದು, ರಸ್ತೆಯಲ್ಲಿ ಓಡಾಡುವುದನ್ನು ನಿರ್ಬಂಧಿಸಲಾಗಿದ್ದು ಪೊಲೀಸರು ಜನರ ಮೇಲೆ ನಿಗಾವಹಿಸಲಿದ್ದಾರೆ ಎಂದು ಹೇಳಿದ ಪೆಡ್ರೊ ಸಾನ್‌ಚೆಝ್, ಪತ್ನಿ ಗೊಮೇಜ್‌ಗೂ ಸೋಂಕು ತಗಲಿರುವುದಾಗಿ ಹೇಳಿದ್ದರು.

ಮುಂಜಾಗ್ರತಾ ಕ್ರಮಗಳನ್ನು ಶೀಘ್ರವೇ ಅಳವಡಿಸಿಕೊಳ್ಳಬೇಕು. ಇದರಿಂದ ಸಮಸ್ಯೆಗಳೂ ತಲೆದೋರಬಹುದು ಆದರೆ ವೈರಸ್ ವಿರುದ್ಧ ನಾವು ಹೋರಾಡಲೇಬೇಕಿದೆ. ಈ ಯುದ್ಧವನ್ನು ನಾವು ಗೆಲ್ಲುತ್ತೇವೆ. ಆದರೆ ಇದಕ್ಕಾಗಿ ನಾವು  ತೆರಬೇಕಾಗಿರುವ ಕನಿಷ್ಠ ಬೆಲೆಯೂ ಮುಖ್ಯವಾಗಿದೆ ಎಂದು ಎಂದು ಸಾನ್‌ಚೇಝ್ ಹೇಳಿದ್ದಾರೆ.

ಔಷಧಿ ಮಳಿಗೆ, ಸೂಪರ್ ಮಾರ್ಕೆಟ್ ಹೊರತು ಪಡಿಸಿ ದೇಶದಾದ್ಯಂತವಿರುವ ಎಲ್ಲ ವಹಿವಾಟುಗಳು ಮುಚ್ಚಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು