ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೆಂದೂ ಕಂಡು ಕೇಳರಿಯದ ನಿರ್ಬಂಧ ವಿಧಿಸುತ್ತೇವೆ: ಇರಾಕ್‌ಗೆ ಟ್ರಂಪ್‌ ಎಚ್ಚರಿಕೆ

Last Updated 6 ಜನವರಿ 2020, 8:24 IST
ಅಕ್ಷರ ಗಾತ್ರ

ವಾಷಿಂಗ್ಟನ್‌:ಅಮೆರಿಕ ಸೇನಾ ಪಡೆಗಳು ದೇಶತೊರೆಯಬೇಕು ಎಂಬ ಇರಾಕ್‌ ಸಂಸತ್‌ನ ಸೂಚನೆಯಿಂದ ಕೆಂಡಾಮಂಡಲಗೊಂಡಿರುವ ಡೊನಾಲ್ಡ್‌ ಟ್ರಂಪ್‌, ಇರಾಕ್‌ ಮೇಲೆ ನಿರ್ಬಂಧ ಹೇರುವ ಬೆದರಿಕೆ ಹಾಕಿದ್ದಾರೆ.

ಒಂದು ವೇಳೆ ಸೇನಾ ಪಡೆಗಳು ಇರಾಕ್‌ ತೊರೆಯುವಂತಾದರೆ, ಅನ್ಬರ್‌ ಪ್ರಾಂತ್ಯದಲ್ಲಿರುವ ಮಿಲಿಟರಿ ವಾಯುನೆಲೆಗೆ ಅಮೆರಿಕ ಮಾಡಿರುವ ಖರ್ಚು ವೆಚ್ಚಗಳನ್ನು ಇರಾಕ್‌ ಭರಿಸಿಕೊಡಬೇಕು ಎಂದು ಹೇಳಿದ್ದಾರೆ.

‘ ಇರಾಕ್‌ನಲ್ಲಿ ನಾವು ಅತ್ಯಾಧುನಿಕ ಮತ್ತು ಅತಿ ದುಬಾರಿ ವಾಯುನೆಲೆಯನ್ನು ಹೊಂದಿದ್ದೇವೆ. ಅದನ್ನು ನಿರ್ಮಿಸಲು ಶತಕೋಟಿ ಡಾಲರ್‌ಗಳಷ್ಟು ಹಣ ವ್ಯಯಿಸಿದ್ದೇವೆ. ನನ್ನ ಸರ್ಕಾರ ಮತ್ತು ಈ ಹಿಂದಿನ ಅಮೆರಿಕ ಸರ್ಕಾರಗಳೂ ಹಣ ಖರ್ಚು ಮಾಡಿವೆ. ಇದನ್ನು ಮರುಪಾವತಿಸದೇ ನಮ್ಮ ಪಡೆಗಳು ಇರಾಕ್‌ ತೊರೆಯುವುದಿಲ್ಲ,’ ಎಂದು ಅವರು ಹೇಳಿದ್ದಾರೆ.

‘ಒಂದು ವೇಳೆ ಸ್ನೇಹ ಪೂರ್ವಕವಲ್ಲದ ನಡೆ ಅನುಸರಿಸಿ ಅಮೆರಿಕ ಪಡೆಗಳನ್ನು ಇರಾಕ್‌ನಿಂದ ಹೊರ ಹಾಕಿದರೆ, ಹಿಂದೆಂದೂ ನೋಡಿರದಂಥ ನಿರ್ಬಂಧವನ್ನು ಇರಾಕ್‌ ಮೇಲೆ ಹೇರುತ್ತೇವೆ. ಅದು ಸ್ವಲ್ಪ ಮಟ್ಟಿಗೆ ಇರಾನ್‌ ಮೇಲಿನ ನಿರ್ಬಂಧದಂತೇ ಇರುತ್ತದೆ,’ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT