ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವುಹಾನ್‌: ಮತ್ತೆ ಕೊರೊನಾ ಸೋಂಕು ಭೀತಿ

Last Updated 3 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ
ADVERTISEMENT
""

ಬೀಜಿಂಗ್‌: ಚೀನಾದ ವುಹಾನ್‌ ಪ್ರಾಂತ್ಯದಲ್ಲಿ ಮತ್ತೆ ಕೊರೊನಾ ವೈರಸ್‌ ಸೋಂಕು ವ್ಯಾಪಿಸುವ ಭೀತಿ ಎದುರಾಗಿದೆ.ಪ್ರಾಂತ್ಯದ 742 ಜನರಲ್ಲಿ ಕೋವಿಡ್‌–19 ದೃಢಪಟ್ಟಿದೆ. ಆದರೆ ಇವರ ತಪಾಸಣೆ ನಡೆಸಿದ ವೇಳೆ ರೋಗದ ಗುಣಲಕ್ಷಣಗಳು ಕಂಡುಬರದೇ ಇರುವುದು ಆತಂಕಕ್ಕೆ ಕಾರಣವಾಗಿದೆ.

ಯಾವುದೇ ಲಕ್ಷಣಗಳು ಗೋಚರಿಸದ(ಅಸಿಂಮ್ಟೊಮ್ಯಾಟಿಕ್‌) ಕೋವಿಡ್‌–19 ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವ ಕಾರಣದಿಂದನಿವಾಸಿಗಳಿಗೆ ಮನೆಯೊಳಗೇ ಇರಲು ಸೂಚಿಸಲಾಗಿದೆ. ಅನಗತ್ಯವಾಗಿ ಹೊರಗಡೆ ತಿರುಗಾಡದಂತೆ ಎಚ್ಚರಿಸಲಾಗಿದೆ.

ಪ್ರಸ್ತುತ ಚೀನಾದಲ್ಲಿ ಒಟ್ಟು 1,075 ಜನರು ಈ ರೀತಿ ಗುಣಲಕ್ಷಣಗಳು ಗೋಚರಿಸದೇ ಕೋವಿಡ್‌–19ಗೆ ತುತ್ತಾಗಿದ್ದಾರೆ. ಈ ಕಾರಣದಿಂದ ಸೋಂಕು ಮೊದಲು ಪತ್ತೆಯಾದ ವುಹಾನ್‌ನಲ್ಲಿರುವ 1.1 ಕೋಟಿ ಜನರನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸಲು ಚೀನಾ ಸರ್ಕಾರ ಚಿಂತನೆ ನಡೆಸಿದೆ.ಒಂಬತ್ತು ವಾರ ಅವಧಿಯ ಲಾಕ್‌ಡೌನ್‌ ಅನ್ನು ಮಾರ್ಚ್‌ 25ಕ್ಕೆ ಹಿಂಪಡೆಯಲಾಗಿತ್ತು.

ಇಂದು ಶೋಕದಿನ: ಕೊರೊನಾ ವೈರಸ್‌ ಸೋಂಕಿನ ಕುರಿತು ಮೊಟ್ಟ ಮೊದಲು ಎಚ್ಚರಿಸಿದ್ದ ಡಾ.ಲಿ.ವೆನ್‌ಲಿಯಾಂಗ್‌ ಹಾಗೂ ಸೋಂಕಿನಿಂದ ಮೃತಪಟ್ಟವರನ್ನು ಸ್ಮರಿಸಿ ಏಪ್ರಿಲ್‌ 4ರಂದು ದೇಶದಾದ್ಯಂತ ಶೋಕ ಆಚರಿಸಲು ಚೀನಾ ನಿರ್ಧರಿಸಿದೆ. ದೇಶದಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ವಿಶ್ವದಾದ್ಯಂತ ಇರುವ ಚೀನಾದ ರಾಯಭಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗುವುದು.

ಕ್ರಮಕ್ಕೆ ಆಗ್ರಹ:ಚೀನಾದಲ್ಲಿರುವ ಮಾಂಸದ ಮಾರುಕಟ್ಟೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಅವರು ವಿಶ್ವಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯನ್ನು ಒತ್ತಾಯಿಸಿದ್ದಾರೆ.

ಭಾರತಕ್ಕೆ ನೆರವು: ಕೊರೊನಾ ವೈರಸ್‌ ಸೋಂಕು ಪ್ರಸರಣ ತಡೆಯಲು ಭಾರತಕ್ಕೆ ₹ 7,618 ಕೋಟಿ (1 ಶತಕೋಟಿ ಡಾಲರ್‌) ತುರ್ತು ನೆರವು ನೀಡುವುದಕ್ಕೆ ವಿಶ್ವಬ್ಯಾಂಕ್‌ ಅನುಮೋದನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT