ಶನಿವಾರ, ಜುಲೈ 31, 2021
27 °C

ಕೋವಿಡ್‌ ಪರೀಕ್ಷೆ: ಮಾದರಿ ಕೊಟ್ಟವರೂ ಪ್ರತ್ಯೇಕವಾಗಿರುವುದು ಕಡ್ಡಾಯ –ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡು ಗಂಟಲು ದ್ರವ ಪರೀಕ್ಷೆಗೆ ಕೊಟ್ಟವರು ವರದಿ ಬರುವವರೆಗೂ ಪ್ರತ್ಯೇಕವಾಗಿರುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಸೋಮವಾರ ಸುತ್ತೋಲೆ ಹೊರಡಿಸಿದೆ.

ಕೋವಿಡ್‌ ಮಾದರಿ ಪರೀಕ್ಷೆಗೆ ಒಳಪಟ್ಟವರು ಪ್ರಯೋಗಾಲಯದಿಂದ ವರದಿ ಬರುವವರೆಗೂ ಪ್ರತ್ಯೇಕವಾಗಿರುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.

ಮಾದರಿಯನ್ನು ನೀಡಿದವರು ವರದಿ ಬರುವವರೆಗೂ ಹೊರಗಡೆ ಹೊಗುವಂತಿಲ್ಲ, ಸಮುದಾಯದಲ್ಲಿ ಸೇರುವಂತಿಲ್ಲ, ಕೆಲಸಕ್ಕೂ ಹೋಗುವಂತಿಲ್ಲ. ಒಂದು ವೇಳೆ ಬೇಜವಾಬ್ದಾರಿಯಿಂದ ನಡೆದುಕೊಂಡರೆ ಸಂಕ್ರಾಮಿಕ ರೋಗಗಳ ಕಾಯ್ದೆ ಅನ್ವಯ ಕಾನೂನು ಕ್ರಮಕೈಗೊಳ್ಳಲಾಗುವುದು ಸರ್ಕಾರ ಎಚ್ಚರಿಸಿದೆ.

ಮಾದರಿ ಕೊಟ್ಟವರು ಹೊರಗಡೆ ತಿರುಗಾಡಿದರೆ, ಕೆಲಸಕ್ಕೆ ಹಾಜರಾದರೆ ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯಗಳಿರುವುದರಿಂದ ಅವರು ಪ್ರತ್ಯೇಕವಾಗಿರುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು