ಸೋಮವಾರ, ಆಗಸ್ಟ್ 2, 2021
26 °C

ಬೆಳೆ ಸಾಲ ಮರುಪಾವತಿ ಅವಧಿ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಹಕಾರ ಸಂಘಗಳ ಮೂಲಕ ರೈತರಿಗೆ ವಿತರಿಸುವ ಬೆಳೆ ಸಾಲ ಹಾಗೂ ಸ್ವಸಹಾಯ ಸಂಘಗಳು ಕಟ್ಟಬೇಕಾದ ಸಾಲದ ಕಂತುಗಳ ಅವಧಿಯನ್ನು ಆಗಸ್ಟ್‌ ಅಂತ್ಯದವರೆಗೆ ವಿಸ್ತರಿಸಲಾಗಿದೆ.

ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹ 3 ಲಕ್ಷವರೆಗೆ ಅಲ್ಪಾವಧಿ ಬೆಳೆ ಸಾಲ ಮತ್ತು ಶೇ 3 ಬಡ್ಡಿ ದರದಲ್ಲಿ ₹ 10 ಲಕ್ಷವರೆಗೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ವಿತರಣೆ ಮತ್ತು ಕಾಯಕ ಯೋಜನೆಯಡಿ ಸ್ವಸಹಾಯ ಸಂಘಗಳಿಂದ ನೀಡಲಾಗಿದ್ದ ಸಾಲ ಮರುಪಾವತಿಗೆ ಜೂನ್‌ ಅಂತ್ಯದವರೆಗೆ ಈ ಹಿಂದೆ ಅವಕಾಶ ನೀಡಲಾಗಿತ್ತು. ಕೋವಿಡ್‌  ಹಿನ್ನೆಲೆಯಲ್ಲಿ ಅವಧಿಯನ್ನು ವಿಸ್ತರಿಸಲಾಗಿದೆ.

ಮರುಪಾವತಿ ದಿನದವರೆಗೆ ಪಾವತಿಸಬೇಕಾದ ತನ್ನ ಪಾಲಿನ ಬಡ್ಡಿ ಸಹಾಯಧನ ₹ 40.11 ಕೋಟಿಯನ್ನು ಸರ್ಕಾರವು ಸಹಕಾರ ಸಂಘಗಳಿಗೆ ಪಾವತಿಸಲಿದೆ. ಸೆಪ್ಟೆಂಬರ್ ಅಂತ್ಯವರೆಗಿನ ತ್ರೈಮಾಸಿಕ ಕ್ಲೈಮ್‌ ಬಿಲ್‌ಗಳನ್ನು ಡಿಸೆಂಬರ್‌ ಅಂತ್ಯದೊಳಗೆ ನಿಬಂಧಕರು ಸಲ್ಲಿಸುವಂತೆ ಸಹಕಾರ ಇಲಾಖೆ ಆದೇಶದಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು