ಶಿರಾಳಕೊಪ್ಪ: ಇಲ್ಲಿಗೆ ಸಮೀಪದ ತೊಗರ್ಸಿ ಗ್ರಾಮದ ಹಳೆ ತೊಗರ್ಸಿ ಪ್ರದೇಶದಲ್ಲಿ 3-4ನೇ ಶತಮಾನದ ದೇವಾಲಯದ ತಳಪಾಯ ಮತ್ತು ರಾಷ್ಟ್ರಕೂಟರ ಅವಧಿಯ ನಾಲ್ಕು ಗೋಸಾಸ ಕಲ್ಲುಗಳನ್ನು ಇತಿಹಾಸ ಸಂಶೋಧಕ ರಮೇಶ್ ಬಿ. ಹಿರೇಜಂಬೂರು ಅವರು ಕ್ಷೇತ್ರ ಕಾರ್ಯ ಕೈಗೊಂಡ ವೇಳೆ ಪತ್ತೆ ಮಾಡಿದ್ದಾರೆ.

ಹಳೆ ತೊಗರ್ಸಿ ಪ್ರದೇಶದ ಕೆರೆಯದಂಡೆಯಲ್ಲಿ ಒಂದು ಪ್ರಾಚೀನ ಶಿವಲಿಂಗವಿದ್ದು, ಅದರ ಕೆಳಭಾಗದಲ್ಲಿ 3-4ನೇ ಶತಮಾನದ ಸುಟ್ಟ ಇಟ್ಟಿಗೆಗಳಿಂದ ರಚಿಸಿರುವ ಬೃಹತ್ ದೇವಾಲಯದ ತಳಪಾಯ ಗೋಚರಿಸಿದೆ. ದೇವಾಲಯದ ಉತ್ತರ ದಿಕ್ಕಿನಲ್ಲಿ ಕೆರೆ
ಇದ್ದು ಇತ್ತೀಚಿಗೆ ಈ ದಂಡೆಯ ಮಣ್ಣನ್ನು ಸ್ಥಳೀಯರು ಗೃಹ ಕಾರ್ಯಗಳಿಗೆ ಜೆಸಿಬಿ ಯಂತ್ರಗಳಿಂದ ಅಗೆದಿದ್ದರು.

ಈ ರಚನೆಯು ಸುಮಾರು ಅರವತ್ತು ಅಡಿ ಉದ್ದವಿದ್ದು, ಅಂದಿನ ದೇವಾಲಯದ ವಿಶಾಲ ವಿಸ್ತೀರ್ಣವನ್ನುಕಾಣಬಹುದಾಗಿದೆ. ಸುಮಾರು ನಾಲ್ಕು ಅಡಿಗಳ ಕೆಳಗೆ ಈ ಇಟ್ಟಿಗೆಗಳ ತಳಪಾಯವಿದೆ.

‘ಈ ಸ್ಥಳದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಮತ್ತು ಅಧ್ಯಯನಗಳು ನಡೆದಲ್ಲಿ ಇತಿಹಾಸದ ಹೊಸ ಸಂಗತಿಗಳು ಹೊರಬರುವ ಸಾಧ್ಯತೆಗಳಿವೆ’ ಎಂದು ರಮೇಶ್ ಹಿರೇಜಂಬೂರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.