ಶುಕ್ರವಾರ, ಜನವರಿ 22, 2021
27 °C

ಅಕ್ಕಸಾಲಿಗನ ಅಂಗಡಿಯಲ್ಲಿ ಕಳವು; ಎರಡು ಮೂಟೆ ಮಣ್ಣು ಕದ್ದೊಯ್ದ ಕಳ್ಳರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಅಂಚೆಪೇಟೆಯಲ್ಲಿರುವ ಅಕ್ಕಸಾಲಿಗರೊಬ್ಬರ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಅಂಗಡಿಯಲ್ಲಿದ್ದ ಎರಡು ಮೂಟೆ ಮಣ್ಣನ್ನು ಕಳ್ಳರು ಕದ್ದೊಯ್ದಿದ್ದಾರೆ.

ಅಂಗಡಿ ಬಾಗಿಲಿನ ಬೀಗ ಮುರಿದು ಕಬ್ಬಿಣದ ಪೆಟ್ಟಿಗೆಯಲ್ಲಿದ್ದ ಮಣ್ಣನ್ನು ಕಳ್ಳರು ಕದ್ದಿದ್ದಾರೆ. ಜುಲೈ 17ರ ರಾತ್ರಿ ಈ ಕಳ್ಳತನ ನಡೆದಿದೆ. ಮಾಸ್ಕ್ ಧರಿಸಿ ಕಳ್ಳರು ಕೃತ್ಯ ಎಸಗಿದ್ದಾರೆ.

ಅಂಗಡಿಯಲ್ಲಿದ್ದ 20 ಸಾವಿರ ನಗದು, ಹವಳದ ಸರ ಸೇರಿದಂತೆ ಗ್ರಾಹಕರು ನೀಡಿದ ಚಿನ್ನಾಭರಣ ಸಹ ಕಳವು ಮಾಡಲಾಗಿದೆ.

ಘಟನೆ ಸಂಬಂಧ ಸೋಮಶೇಖರ್ ಎಂಬುವರು ಕೆ.ಆರ್. ಮಾರುಕಟ್ಟೆ ಠಾಣೆಗೆ ದೂರು ನೀಡಿದ್ದಾರೆ. ಮಣ್ಣಿನಲ್ಲಿ ಚಿನ್ನದ ಕಣಗಳು ಇದ್ದವು. ಚಿನ್ನವನ್ನು ತೆಗೆಯಲು ಮಣ್ಣು ತರಿಸಲಾಗಿತ್ತು ಎನ್ನಲಾಗುತ್ತಿದೆ‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು