ಸೋಮವಾರ, ಏಪ್ರಿಲ್ 6, 2020
19 °C
26 Polls to 55 RS seats on March 26

ರಾಜ್ಯಸಭೆಯ 55 ಸ್ಥಾನಗಳಿಗೆ ಮಾರ್ಚ್ 26ಕ್ಕೆ ಚುನಾವಣೆ

ಪಿಟಿಐ Updated:

ಅಕ್ಷರ ಗಾತ್ರ : | |

EVM

ನವದೆಹಲಿ : ಏಪ್ರಿಲ್‌ನಲ್ಲಿ ರಾಜ್ಯಸಭೆಯ 55 ಸ್ಥಾನಗಳು ಖಾಲಿಯಾಗುತ್ತಿದ್ದು, ಈ ಸ್ಥಾನಗಳಿಗೆ ಮಾರ್ಚ್ 26ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ.

ಒಟ್ಟು 55 ಸ್ಥಾನಗಳ ಪೈಕಿ, 17 ರಾಜ್ಯಗಳ 51 ಸಂಸದರ ಅವಧಿ ಏಪ್ರಿಲ್‌ನಲ್ಲಿ ಮುಕ್ತಾಯವಾಗಲಿದೆ. ಇನ್ನುಳಿದ ನಾಲ್ವರು ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅವರ ಅವಧಿಯೂ ಇದೇ ಏಪ್ರಿಲ್‌ಗೆ ಕೊನೆಯಾಗಲಿದೆ. 

ಮಾರ್ಚ್ 6ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಿದ್ದು, ಮಾರ್ಚ್ 13 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಮತದಾನ ಮುಕ್ತಾಯವಾದ ಒಂದು ಗಂಟೆಯ ಬಳಿಕ ಮಾರ್ಚ್ 26ರ ಸಂಜೆ ಮತ ಎಣಿಕೆ ಕಾರ್ಯ ನಡೆಯಲಿದೆ. 

ಏಪ್ರಿಲ್‌ನಲ್ಲಿ ಅವಧಿ ಮುಗಿಯಲಿರುವ ರಾಜ್ಯಸಭಾ ಸದಸ್ಯರ ಪೈಕಿ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ (ಜೆಡಿಯು), ಕೇಂದ್ರ ಸಚಿವ ರಾಮ್‌ದಾಸ್ ಅಠವಳೆ (ಆರ್‌ಪಿಐ– ಅಠವಳೆ), ಕಾಂಗ್ರೆಸ್ ನಾಯಕ ಮೋತಿಲಾಲ್ ವೋರಾ, ಕೇಂದ್ರದ ಮಾಜಿ ಸಚಿವರಾದ ವಿಜಯ್ ಗೋಯೆಲ್ (ಬಿಜೆಪಿ), ಕುಮಾರಿ ಶೈಲ್ಜಾ (ಕಾಂಗ್ರೆಸ್‌), ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಪ್ರಮುಖರು. ‌

ಮಹಾರಾಷ್ಟ್ರದಿಂದ 7, ತಮಿಳುನಾಡಿನಿಂದ 6, ಪಶ್ಚಿಮ ಬಂಗಾಳ ಮತ್ತು ಬಿಹಾರದಿಂದ ತಲಾ 5, ಒಡಿಶಾ, ಗುಜರಾತ್ ಮತ್ತು ಆಂಧ್ರದಿಂದ ತಲಾ 4, ಅಸ್ಸಾಂ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಿಂದ ತಲಾ 3, ತೆಲಂಗಾಣ, ಛತ್ತೀಸಗಡ, ಹರಿಯಾಣ ಮತ್ತು ಜಾರ್ಖಂಡ್‌ನಿಂದ ತಲಾ 2, ಹಿಮಾಚಲ ಪ್ರದೇಶ, ಮಣಿಪುರ ಮತ್ತು ಮೇಘಾಲಯದಿಂದ ತಲಾ ಒಂದೊಂದು ಸ್ಥಾನಗಳು ಖಾಲಿಯಾಗಲಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು