ನವದೆಹಲಿ (ಪಿಟಿಐ):ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅನರ್ಹಗೊಳಿಸಿದ್ದರ ವಿರುದ್ಧ ಎಎಪಿ ಬಂಡಾಯ ಶಾಸಕ ದೇವೇಂದರ್ ಸೆಹ್ರಾವತ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಅನರ್ಹತೆಯ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯುವ ವೇಳೆ ಶಾಸಕ ತನ್ನ ವಿರೋಧವನ್ನು ಸ್ಪೀಕರ್ ಎದುರು ವ್ಯಕ್ತಪಡಿಸಬಹುದು ಎಂದು ನ್ಯಾಯಾಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿದ್ದ ಪೀಠ ಹೇಳಿದೆ.
ಅರ್ಜಿ ವಿಚಾರಣೆಗೆ ಕೋರ್ಟ್ ಒಪ್ಪದಿದ್ದಾಗ, ಸೆಹ್ರಾವತ್ ತಮ್ಮ ಅರ್ಜಿಯನ್ನು ಹಿಂಪಡೆದರು. ‘ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ನಾನು ಪಡೆದಿಲ್ಲ. ಆದ್ದರಿಂದ ಅನರ್ಹತೆಯ ನೋಟಿಸ್ ನೀಡುವುದು ಕಾನೂನು ಬಾಹಿರ’ ಎಂದು ವಾದಿಸಿದ್ದರು.
ಸೆಹ್ರಾವತ್ ಅವರೊಂದಿಗೆ ಮತ್ತೊಬ್ಬ ಎಎಪಿ ಶಾಸಕ ಅನಿಲ್ ಬಾಜಪೈ ಅವರಿಗೂ ಬಿಜೆಪಿ ಸೇರಿರುವುದಕ್ಕೆಪಕ್ಷಾಂತರ ನಿಷೇಧ ಕಾಯ್ದೆ ಅಡಿ ಪಕ್ಷದಿಂದ ಅನರ್ಹಗೊಳಿಸಲಾಗಿದೆ.
ಈ ಇಬ್ಬರು ಶಾಸಕರ ವಿರುಧಎಎಪಿ ವಕ್ತಾರ ಹಾಗೂ ಶಾಸಕ ಸೌರಭ್ ಭಾರದ್ವಾಜ್ ಅವರು ದೂರು ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.