ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ವರ್ಷಗಳಿಂದ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ 37 ಲಕ್ಷ ಪ್ರಕರಣಗಳು

Last Updated 29 ಜೂನ್ 2020, 4:44 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತವಿರುವ ಹೈಕೋರ್ಟ್, ಜಿಲ್ಲಾ ನ್ಯಾಯಾಲಯ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಕಳೆದ 10 ವರ್ಷಗಳಿಂದ37 ಲಕ್ಷಕ್ಕಿಂತಲೂ ಹೆಚ್ಚು ಪ್ರಕರಣಗಳು ವಿಲೇವಾರಿಯಾಗದೆಬಾಕಿ ಉಳಿದಿವೆಎಂದು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಕೋಶ(ಎನ್‌ಜೆಡಿಜಿ) ಹೇಳಿದೆ. ಜಿಲ್ಲಾ ನ್ಯಾಯಾಲಯ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ 28 ಲಕ್ಷ ಪ್ರಕರಣಗಳು ಮತ್ತು ಹೈಕೋರ್ಟ್‌ನಲ್ಲಿ 9,20,000 ಪ್ರಕರಣಗಳು ಬಾಕಿ ಇವೆ. 6,60,000 ಪ್ರಕರಣಗಳು 20 ವರ್ಷದಿಂದ ಬಾಕಿ ಇರುವವುಗಳಾಗಿದ್ದು, ಮೂರು ದಶಕಗಳಿಂದ ಬಾಕಿ ಉಳಿದ 1,31 ,000 ಪ್ರಕರಣಗಳು ಇವೆ.

ಪ್ರಕರಣಗಳು ಬಾಕಿ ಇರುವ ಬಗ್ಗೆ ವಿಶೇಷವಾಗಿ ಅಪರಾಧ ಪ್ರಕರಣಗಳ ಮೇಲ್ಮನವಿಗಳು ಬಾಕಿ ಇರುವ ಬಗ್ಗೆ ಸುಪ್ರೀಂಕೋರ್ಟ್ ಜೂನ್ 15ರಂದು ಖೇದ ವ್ಯಕ್ತಪಡಿಸಿತ್ತು. ಅಲಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಇರುವ ಕೊಲೆ ಅಪರಾಧಿಯ ಮೇಲ್ಮನವಿಯನ್ನು ಆಲಿಸುತ್ತಿದ್ದ ವೇಳೆ ಬಾಕಿ ಇರುವ ಪ್ರಕರಣಗಳ ಬಗ್ಗೆ ಖೇದ ವ್ಯಕ್ತ ಪಡಿಸಿದ ಸುಪ್ರೀಂಕೋರ್ಟ್ ಇದು ನ್ಯಾಯಾಂಗ ವ್ಯವಸ್ಥೆಯ ಮುಂದಿರುವ ಸವಾಲು ಎಂದು ಹೇಳಿದೆ. ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಮನವಿಯನ್ನು ಆದಷ್ಟು ಬೇಗ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ರೀತಿಯ ಮನವಿಗಳನ್ನು ನಿರ್ದಿಷ್ಟ ಸಮಯದಲ್ಲಿ ಪರಿಗಣಿಸದೇ ಇದ್ದರೆ ಮನವಿಯ ಹಕ್ಕು ಭ್ರಮೆ ಎಂದೆನಿಸಿಬಿಡುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಅಪರಾಧ ಪ್ರಕರಣಗಳಲ್ಲಿನ ಮೇಲ್ಮನವಿ ಬಾಕಿ ಇರುವುದನ್ನು ನಿಭಾಯಿಸಲು ಯಾವ ರೀತಿ ಕಾರ್ಯಕೈಗೊಳ್ಳುತ್ತೀರಿ ಎಂಬುದರ ಬಗ್ಗೆ ಕಾರ್ಯಯೋಜನೆಯನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್ ಅಲಹಾಬಾದ್, ರಾಜಸ್ಥಾನ, ಮಧ್ಯಪ್ರದೇಶ, ಪಟನಾ, ಒಡಿಶಾ ಮತ್ತು ಬಾಂಬೆ ಹೈಕೋರ್ಟ್‌ಗಳಿಗೆ ಹೇಳಿದೆ.

10 ವರ್ಷ ಹಿಂದಿನ 32.9 ದಶಲಕ್ಷ ಪ್ರಕರಣಗಳ ಪೈಕಿ ಶೇ.8.5 ರಷ್ಟು ಪ್ರಕರಣಗಳು ಜಿಲ್ಲೆ ಮತ್ತು 2.8 ದಶಲಕ್ಷ ಪ್ರಕರಣಗಳು ತಾಲ್ಲೂಕು ನ್ಯಾಯಾಲಯಗಳಲ್ಲಿ ಬಾಕಿ ಇವೆ.ಜಿಲ್ಲೆ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ 20 ವರ್ಷ ಹಿಂದಿನ 5 ಲಕ್ಷಕ್ಕಿಂತಲೂ ಹೆಚ್ಚು ಮತ್ತು 30 ವರ್ಷಗಳಿಗಿಂತ ಹಿಂದಿನ 85 ,141 ಪ್ರಕರಣಗಳು ಬಾಕಿ ಇವೆ.

ವಿಲೇವಾರಿಯಾಗದೆ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಹೇಳುವುದಾದರೆ ಹೈಕೋರ್ಟ್‌ಗಳಿಗಿಂತ ಜಿಲ್ಲಾ ನ್ಯಾಯಾಲಯಗಳೇ ಉತ್ತಮವಾಗಿವೆ. ದೇಶದಾದ್ಯಂತವಿರುವ 25 ಹೈಕೋರ್ಟ್‌ಗಳಲ್ಲಿ 47 ಲಕ್ಷಕ್ಕಿಂತಲೂಹೆಚ್ಚು ಪ್ರಕರಣಗಳು ಬಾಕಿ ಇವೆ. ಈ ಪೈಕಿ 9,20,000 ಪ್ರಕರಣಗಳು 10 ವರ್ಷ ಹಳೆಯದ್ದಾಗಿದ್ದು, 20 ವರ್ಷ ಹಳೆಯದಾದ 1,58,000 ಮತ್ತು 30 ವರ್ಷ ಅಥವಾ ಅದಕ್ಕಿಂತ ಹಿಂದಿನ 46 ,754 ಪ್ರಕರಣಗಳಿವೆ.

ಅತೀ ಹೆಚ್ಚು ಜನಸಂಖ್ಯೆ ಇರುವ ರಾಜ್ಯವಾದ ಉತ್ತರ ಪ್ರದೇಶದ ಜಿಲ್ಲೆ ಮತ್ತು ತಾಲ್ಲೂಕು ನ್ಯಾಯಾಲಯದಲ್ಲಿ 2.8 ದಶಲಕ್ಷ ಪ್ರಕರಣಗಳ ಪೈಕಿ ಶೇ.40ರಷ್ಟು ಪ್ರಕರಣಗಳು ಬಾಕಿ ಇವೆ.20 ವರ್ಷ ಹಳೆಯ 5,0000 ಪ್ರಕರಣಗಳಲ್ಲಿ ಶೇ.43ರಷ್ಟು ಪ್ರಕರಣಗಳು ಬಾಕಿ ಇವೆ,
ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್‌ನಲ್ಲಿ ಕಳೆದ 10 ವರ್ಷದಿಂದ 9,20,000 ಪ್ರಕರಣಗಳಲ್ಲಿ 2,76,000 ಪ್ರಕರಣಗಳು ಬಾಕಿ ಇವೆ. 20 ವರ್ಷ ಹಿಂದಿನ ಶೇ.55 ಪ್ರಕರಣಗಳು ಮತ್ತು 30 ವರ್ಷ ಹಿಂದಿನ ಶೇ.86 ಪ್ರಕರಣಗಳು ಬಾಕಿ ಇವೆ.

ಈ ಅಂಕಿ ಅಂಶಗಳು ನ್ಯಾಯಾಂಗದಲ್ಲಿನ ಖಾಲಿ ಹುದ್ದೆಗಳು ಮತ್ತು ಪ್ರಕರಣಗಳ ಬಾಕಿ ಉಳಿಯುವಿಕೆ ನಡುವಿನ ಪರಸ್ಪರ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಮುಖ್ಯವಾಗಿ, ನ್ಯಾಯಾಂಗದಲ್ಲಿನ ಖಾಲಿ ಹುದ್ದೆಗಳುಪ್ರದೇಶ ಕೇಂದ್ರಿತ ಅಂಶವಾಗಿದ್ದು, ಅದು ರಾಜ್ಯದಿಂದ ರಾಜ್ಯಕ್ಕೆವ್ಯತ್ಯಸ್ತವಾಗಿದೆ. ಉದಾಹರಣೆಗೆ ಉತ್ತರಪ್ರದೇಶವು ನ್ಯಾಯಾಂಗ ವ್ಯವಸ್ಥೆಯಲ್ಲಿ ಖಾಲಿ ಹುದ್ದೆಗಳು ಹೆಚ್ಚಿರುವ ರಾಜ್ಯಗಳಲ್ಲಿ ಒಂದಾಗಿದೆ ಇಲ್ಲಿ ಹೆಚ್ಚಿನ ಪ್ರಕರಣಗಳು ಬಾಕಿ ಉಳಿದಿವೆ ಎಂದು 'ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ'ಯ ಹಿರಿಯ ಫೆಲೋ ಅಮೀನ್ ಜೌಹರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT