ಭಾನುವಾರ, ಫೆಬ್ರವರಿ 23, 2020
19 °C

ನಾಲ್ಕು ವರ್ಷಗಳ ಅವಧಿಯ ಸಮಗ್ರ ಬಿ.ಇಡಿ. ಕೋರ್ಸ್‌ ಜಾರಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ  ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವಂತೆ ಒಟ್ಟು ನಾಲ್ಕು ವರ್ಷಗಳ ಅವಧಿಯ, ಸಮಗ್ರ ಬಿ.ಇಡಿ ಕೋರ್ಸ್‌ ರೂಪಿಸಿದ್ದು, ಅಧಿಸೂಚನೆಯನ್ನು ಹೊರಡಿಸಲಾಗಿದೆ’ ಎಂದು ಸರ್ಕಾರ ರಾಜ್ಯಸಭೆಯಲ್ಲಿ ಪ್ರಕಟಿಸಿದೆ.

ಪ್ರಶ್ನೋತ್ತರ ಅವಧಿಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್‌ ನಿಶಾಂಕ್‌ ಅವರು ಗುರುವಾರ ಈ ವಿಷಯ ತಿಳಿಸಿದರು.

‘ನೂತನ ಸಮಗ್ರ ಕೋರ್ಸ್‌ನಿಂದಾಗಿ ವಿದ್ಯಾರ್ಥಿಗಳಿಗೆ ಒಂದು ವರ್ಷದ ಅವಧಿಯು ಉಳಿಯಲಿದೆ. ಪಠ್ಯಕ್ರಮವನ್ನೂ  ಅಂತಿಮಗೊಳಿಸಲಾಗಿದೆ. ಆಸಕ್ತಿ ಇರುವ ಶಿಕ್ಷಣ ಸಂಸ್ಥೆಗಳು ನೂತನ ಕೋರ್ಸ್‌ ಜಾರಿಗೊಳಿಸಬಹುದು’ ಎಂದು ತಿಳಿಸಿದರು.

‘ಕೋರ್ಸ್‌ನ ಜಾರಿಗೆ ಎಲ್ಲ ಅಗತ್ಯ ಸಿದ್ಧತೆಗಳಾಗಿವೆ. ಮೂರು ರೀತಿಯ ಕೋರ್ಸ್‌ಗಳಿವೆ. ಬಿಎ–ಬಿ.ಇಡಿ., ಬಿ.ಎಸ್‌ಸಿ –ಬಿ.ಇಡಿ ಅಥವಾ ಬಿ.ಕಾಂ–ಬಿ.ಇಡಿ. ವಿದ್ಯಾರ್ಥಿಗಳು ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು’ ಎಂದು ವಿವರಿಸಿದರು.

ಶಿಕ್ಷಕರಿಗೆ ತರಬೇತಿ: ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿಯಾದ ಬಳಿಕ ಎಲ್ಲ ಶಿಕ್ಷಕರು ಅಗತ್ಯ ಪೂರಕ ತರಬೇತಿ ಪಡೆಯುವುದು ಅಗತ್ಯ. ಈವರೆಗೆ ತರಬೇತಿ ಪಡೆಯದವರು 2019ರ ಅಕ್ಟೋಬರ್ 31ರ ಒಳಗೆ ತರಬೇತಿ ಪಡೆಯಬಹುದು ಎಂದು ತಿಳಿಸಿದರು.

2015ರವರೆಗೂ ಸುಮಾರು 7 ಲಕ್ಷ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಹೆಚ್ಚಿನವರು ಇನ್ನೂ ತರಬೇತಿಯಿಂದ ಹೊರಗಿದ್ದಾರೆ. ಆರ್‌ಟಿಇ ಕಾಯ್ದೆ ಪ್ರಕಾರ, ಶಿಕ್ಷಕರು ಕಡ್ಡಾಯವಾಗಿ ತರಬೇತಿಯನ್ನು ಪಡೆಯಬೇಕಾಗಿದೆ ಎಂದು ಮಾಹಿತಿ ನೀಡಿದರು.

‘ದೇಶದಲ್ಲಿ ಒಟ್ಟು 19,542 ಶಿಕ್ಷಕ ತರಬೇತಿ ಸಂಸ್ಥೆಗಳಿದ್ದು, 25,876 ಕೋರ್ಸ್‌ಗಳಿವೆ. ಸದ್ಯ, ಸುಮಾರು 15 ಲಕ್ಷ ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ’ ಎಂದು ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು