ಕೋಮು ದಳ್ಳುರಿ ಹಬ್ಬಿಸಲು ಯತ್ನ: ಐವರ ಬಂಧನ

7

ಕೋಮು ದಳ್ಳುರಿ ಹಬ್ಬಿಸಲು ಯತ್ನ: ಐವರ ಬಂಧನ

Published:
Updated:

ಕೊಯಮತ್ತೂರು: ಹಿಂದೂಪರ ಸಂಘಟನೆಗಳ ನಾಯಕರನ್ನು ಕೊಲ್ಲುವ ಮೂಲಕ ಸಮಾಜದಲ್ಲಿ ಕೋಮುದಳ್ಳುರಿ ಹಬ್ಬಿಸಲು ಸಂಚು ನಡೆಸಿದ್ದ ಆರೋಪದ ಮೇಲೆ ಐವರು ಆರೋಪಿಗಳನ್ನು ವಿಶೇಷ ತನಿಖಾ ದಳದ ‍ಪೊಲೀಸರು ಬಂಧಿಸಿದ್ದಾರೆ.

‘ಹಿಂದೂ ಮಕ್ಕಳ್ ಕಚ್ಚಿ’ (ಎಚ್‍ಎಂಕೆ) ಸ್ಥಾಪಕ ಅರ್ಜುನ್ ಸಂಪತ್ ಮತ್ತು ‘ಶಕ್ತಿ ಸೇನಾ ನಾಯಕ’ ಅನ್ಬು ಮಾರಿ ಅವರನ್ನು ಕೊಲ್ಲುವುದು ಆರೋಪಿಗಳ ಉದ್ದೇಶವಾಗಿತ್ತು’ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ. ಪೆರೋಲ್‌ ಮೇಲೆ ಹೊರಗೆ ಬಂದಿದ್ದ ಅಪರಾಧಿಯೊಬ್ಬನ ಮದುವೆಯಲ್ಲಿ ಪಾಲ್ಗೊಳ್ಳಲು ಅವರೆಲ್ಲರೂ ನಗರಕ್ಕೆ ಬಂದಿದ್ದರು. ಈ ಕುರಿತು ಗುಪ್ತಚರ ಇಲಾಖೆ ನೀಡಿದ್ದ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಬಂಧಿತರನ್ನು ಕೊಯಮತ್ತೂರಿನ ಆರ್‌.ಆಶಿಕ್‌, ಚೆನ್ನೈನ ಜಾಫರ್‌ ಸಾದಿಕ್‌ ಅಲಿ, ಎಸ್‌.ಶಲವುದ್ದೀನ್‌, ತಿರುವನಂತಪುರದ ಎಸ್‌. ಇಸ್ಲಾಯಿಲ್‌ ಹಾಗೂ ಪಲ್ಲವರಂನ ಎಸ್‌. ಶಂಸುದ್ದೀನ್‌ ಎಂದು ಗುರುತಿಸಲಾಗಿದೆ. ಬಂಧಿತರಿಂಧ ಮೊಟರ್‌ ಸೈಕಲ್‌, ಐದು ಮಚ್ಚು ಮತ್ತು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರದ ತ್ವರಿತ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಯಿತು. ಸೆ.4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !