ತಮಿಳುನಾಡಿನಲ್ಲಿ  ಜಲ್ಲಿಕಟ್ಟು ಆಚರಣೆ: ಮೊದಲ ದಿನವೇ 79 ಜನರಿಗೆ ಗಾಯ

7

ತಮಿಳುನಾಡಿನಲ್ಲಿ  ಜಲ್ಲಿಕಟ್ಟು ಆಚರಣೆ: ಮೊದಲ ದಿನವೇ 79 ಜನರಿಗೆ ಗಾಯ

Published:
Updated:

ಚೆನ್ನೈ: ತಮಿಳುನಾಡಿನಲ್ಲಿ ಸಾಂಪ್ರದಾಯಿಕ ಜಲ್ಲಿಕಟ್ಟು ಆಚರಣೆ ವೇಳೆ ಮೊದಲ ದಿನವೇ 79 ಜನರು ಗಾಯಗೊಂಡಿದ್ದಾರೆ ಎಂದು ತಮಿಳುನಾಡು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ.

ತಮಿಳುನಾಡಿನಾದ್ಯಂತ ಮೊದಲ ದಿನ 500ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಲ್ಲಿಕಟ್ಟು ಆಚರಣೆ ಮಾಡಲಾಗಿದೆ. ಗಾಯಗೊಂಡ 79 ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 279ಕ್ಕೂ ಹೆಚ್ಚು ಜನರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರಾರು ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. 

ಪಲಮೇಡು ಮತ್ತು ಮಧುರೈನಲ್ಲಿ ಅತಿ ಹೆಚ್ಚು ಜನರು ಗಾಯಗೊಂಡಿದ್ದಾರೆ

2016ರಲ್ಲಿ ಸುಪ್ರೀಂ ಕೋರ್ಟ್‌ ಜಲ್ಲಿಕಟ್ಟು ಆಚರಣೆ ಮೇಲೆ ನಿಷೇಧವೇರಿತ್ತು. ಆದರೆ ತಮಿಳುನಾಡು ಸರ್ಕಾರ ಜಲ್ಲಿಕಟ್ಟು ಆಚರಣೆ ನಮ್ಮ ಸಂಸ್ಕೃತಿಯ ಒಂದು ಭಾಗ ಎಂದು ಹೇಳಿ ಸುಗ್ರಿವಾಜ್ಞೆ ಜಾರಿ ಮಾಡುವ ಮೂಲಕ ಆಚರಣೆಗೆ ಹಸಿರು ನಿಶಾನೆ ತೋರಿತ್ತು. 

ಜಲ್ಲಿಕಟ್ಟು ಆಚರಣೆ ವೇಳೆ ಹೋರಿಗಳಿಗೆ ಮದ್ಯ ಕುಡಿಸಿ ಅವುಗಳ ಮುಖಕ್ಕೆ ಕಾರದ ಪುಡಿ ಎರಚುವುದರಿಂದ ಹೋರಿಗಳು ದಿಕ್ಕಾಪಾಲಾಗಿ ಓಡುವುದರಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತವೆ, ಅಲ್ಲದೆ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂದು ಪ್ರಾಣಿದಯಾ ಸಂಘಟನೆಗಳು ಆರೋಪಿಸಿವೆ. 

ಸಂಕ್ರಾಂತಿ ಹಬ್ಬದ ದಿನದಂದು ಆರಂಭವಾಗುವ ಈ ಆಚರಣೆ ತಮಿಳುನಾಡಿನಲ್ಲಿ ಒಂದು ತಿಂಗಳವರೆಗೂ ನಡೆಯಲಿದೆ. 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !