ಭಾನುವಾರ, ಮಾರ್ಚ್ 29, 2020
19 °C

ಮಂಗಳೂರಿನ ಅಡ್ಲಿನ್ ‘ಮಿಸ್‌ ದಿವಾ ಯುನಿವರ್ಸ್‌’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಲಿವಾ ಮಿಸ್‌ ದಿವಾ ಯುನಿವರ್ಸ್‌ 2020 ಸ್ಪರ್ಧೆಯಲ್ಲಿ ಮಂಗಳೂರಿನ ಅಡ್ಲಿನ್ ಕ್ಯಾಸ್ಟೆಲಿನೋ ವಿಜೇತರಾಗಿದ್ದಾರೆ.

ಯಶ್‌ರಾಜ್‌ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದಿನ ಆವೃತ್ತಿಯ ವಿಜೇತೆ ವರ್ತಿಕಾ ಸಿಂಗ್‌ ಅವರು ಅಡ್ಲಿನ್‌ ಅವರಿಗೆ ಕಿರೀಟ ತೊಡಿಸಿದರು. ಪುಣೆಯ ನೇಹಾ ಜೈಸ್ವಾಲ್‌ ಅವರು ಮಿಸ್‌ ದಿವಾ ರನ್ನರ್‌ ಅಪ್‌ ಆಗಿ ಆಯ್ಕೆಯಾಗಿದ್ದಾರೆ. ಆವೃತಿ ಚೌಧರಿ ಅವರು ಮಿಸ್‌ ದಿವಾ ಸುಪ್ರಾನೇಷನಲ್‌ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ವರ್ಷಾಂತ್ಯಕ್ಕೆ ನಡೆಯಲಿರುವ ಮಿಸ್‌ ಯುನಿವರ್ಸ್‌ ಸ್ಪರ್ಧೆಯಲ್ಲಿ ಅಡ್ಲಿನ್‌ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಮಾಜಿ ಮಿಸ್‌ ಯುನಿವರ್ಸ್‌ ಲಾರಾ ದತ್ತಾ, ಬಾಲಿವುಡ್‌ ನಟ ಅನಿಲ್‌ ಕಪೂರ್‌, ನಟಿ ಯಾಮಿ ಗೌತಮಿ ಮತ್ತಿತರರು ತೀರ್ಪುಗಾರರಾಗಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು