ಭಾನುವಾರ, ಸೆಪ್ಟೆಂಬರ್ 19, 2021
23 °C

ರಾಜೀವ್ ಗಾಂಧಿ ಹತ್ಯೆಗೆ ಬಿಜೆಪಿಯ ದ್ವೇಷ ರಾಜಕೀಯವೇ ಕಾರಣ: ಅಹ್ಮದ್ ಪಟೇಲ್

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಗೆ ಬಿಜೆಪಿಯ ದ್ವೇಷ ರಾಜಕೀಯವೇ ಕಾರಣ ಎಂದು ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ಆರೋಪಿಸಿದ್ದಾರೆ.

‘ದೇಶಕ್ಕಾಗಿ ಹುತಾತ್ಮರಾದ ಮಾಜಿ ಪ್ರಧಾನಿಯನ್ನು ನಿಂದಿಸುವುದು ಹೇಡಿತನದ ಪರಮಾವಧಿ, ಈ ಹತ್ಯಗೆ ಯಾರು ಕಾರಣ? ರಾಜೀವ್ ಗಾಂಧಿಯವರ ಜೀವಕ್ಕೆ ಅಪಾಯವಿರುವುದಾಗಿ ಗುಪ್ತಚರ ಮಾಹಿತಿ ಇದ್ದರೂ ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಸರ್ಕಾರ ಹೆಚ್ಚುವರಿ ಭದ್ರತೆಯನ್ನು ನಿರಾಕರಿಸಿರುವುದು ಹತ್ಯೆಗೆ ಮೂಲ ಕಾರಣ ಎಂದು ಅಹ್ಮದ್ ಪಟೇಲ್ ಟ್ವೀಟ್ ಮಾಡಿದ್ದಾರೆ.

ಹೆಚ್ಚುವರಿ ಭದ್ರತೆಗಾಗಿ ಹಲವು ಬಾರಿ ವಿ.ಪಿ.ಸಿಂಗ್ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು ಎಂದು ಪಟೇಲ್ ತಿಳಿಸಿದ್ದಾರೆ.

ಬಿಜೆಪಿ ದ್ವೇಷ ರಾಜಕಾರಣದಿಂದಾಗಿ ಮಾಜಿ ಪ್ರಧಾನಿಯ ಹತ್ಯೆ ನಡೆಯಿತು. ಅವರ ಮೇಲೆ ಇರುವ ಆರೋಪಗಳಿಗೆ ಉತ್ತರಿಸಲು ಇಂದು ಅವರು ನಮ್ಮೊಂದಿಗಿಲ್ಲ ಎಂದು ಪಟೇಲ್ ಹೇಳಿದ್ದಾರೆ

ರಾಜೀವ್ ಗಾಂಧಿ ಅವರು ನಂಬರ್ 1 ಭ್ರಷ್ಟಾಚಾರಿಯಾಗಿ ಜೀವನ ಕೊನೆಗೊಳಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ವ್ಯಂಗ್ಯವಾಡಿದ್ದರು. ಐಎನ್‌ಎಸ್ ಯುದ್ಧ ನೌಕೆಯನ್ನು ಕುಟುಂಬದೊಂದಿಗೆ ರಜಾದಿನ ಕಳೆಯಲು ರಾಜೀವ್ ಗಾಂಧಿ ಬಳಸಿರುವುದಾಗಿ ಮೋದಿ ಬುಧವಾರ ಆರೋಪಿಸಿದ್ದರು. ಇದಕ್ಕೆ ಅಹ್ಮದ್ ಪಟೇಲ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:

ಯುದ್ಧನೌಕೆಯನ್ನು ಟ್ಯಾಕ್ಸಿಯಂತೆ ಬಳಸಿದ್ದ ರಾಜೀವ್‌: ಮೋದಿ,

ನಂ.1 ಭ್ರಷ್ಟರಾಗಿಯೇ ಜೀವ ಬಿಟ್ಟ ರಾಜೀವ್‌ ಗಾಂಧಿ: ಮೋದಿ ಮೂದಲಿಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು