ಶುಕ್ರವಾರ, ಮೇ 29, 2020
27 °C
ಇಬ್ಬರ ಆರೋಪವೂ ಒಂದೇ: ಮದುವೆಗೆ ಒತ್ತಾಯ

ಮದುವೆ ನಿರಾಕರಣೆ: ಸ್ನೇಹಿತನ ಮೇಲೆ ಆ್ಯಸಿಡ್ ಎರಚಿದ ತರುಣಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Love and hate story

ಆಗ್ರಾ: ಪ್ರೇಮ ವೈಫಲ್ಯವೋ ಅಥವಾ ಮದುವೆಯಾಗಲು ಒಪ್ಪದಿರುವುದಕ್ಕೋ ಕೋಪದಿಂದ ಹುಡುಗರು ಹುಡುಗಿಯರ ಮೇಲೆ ಆ್ಯಸಿಡ್ ದಾಳಿ ಮಾಡಿರುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಉಲ್ಟಾ ಪ್ರಕರಣ. 19 ವರ್ಷದ ತರುಣಿಯೊಬ್ಬಳನ್ನು ಬಂಧಿಸಲಾಗಿದೆ. ತನ್ನನ್ನು ಮದುವೆಯಾಗಲು ನಿರಾಕರಿಸಿದ ತನ್ನ ಬಾಯ್ ಫ್ರೆಂಡ್ ಮೇಲೆ ಆಕೆ ಆ್ಯಸಿಡ್ ಹಾಕಿದ್ದೇ ಬಂಧನಕ್ಕೆ ಕಾರಣ.

ಇದು ನಡೆದದ್ದು ಉತ್ತರ ಪ್ರದೇಶದ ಕಾವರ್ಸಿ ಪೊಲೀಸ್ ಠಾಣಾ ವ್ಯಾಪ್ತಿಯ ಜೀವನಗಢ ಎಂಬಲ್ಲಿ.

ಅಪರಾಧ ಸಂಹಿತೆಯ 326ಎ ಅಡಿಯಲ್ಲಿ ತರುಣಿಯ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಈ ಕುರಿತು ತರುಣನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.

ಇವರಿಬ್ಬರೂ ಬಹಳ ಕಾಲದಿಂದ ಪ್ರೀತಿಸುತ್ತಿದ್ದರು. ಆದರೆ ಒಂದು ತಿಂಗಳ ಹಿಂದೆ ಯುವಕನು ಆಕೆಯೊಂದಿಗೆ ಮಾತು ಬಿಟ್ಟಿದ್ದ. ಆದರೆ ಅವಳೇ ಹುಡುಗನನ್ನು ಸಂಪರ್ಕಿಸಿ ಮದುವೆಗೆ ಒತ್ತಾಯಿಸುತ್ತಿದ್ದ ಎಂದು ಆತನ ತಾಯಿ ಆರೋಪಿಸಿದ್ದಾರೆ. ಇಷ್ಟೇ ಅಲ್ಲದೆ, ಪ್ರತಿ ದಿನ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದಳಂತೆ. ಮಾತನಾಡಲೆಂದು ಗುರುವಾರ ಆತನನ್ನು ಆಕೆ ಕರೆದಿದ್ದಾಳೆ. ಆತ ಬರಲೊಲ್ಲೆ ಎಂದಿದ್ದಾನೆ. ವ್ಯಗ್ರಗೊಂಡ ಈ ಯುವತಿ, ತನ್ನ ಮನೆಯ ಬಳಿಯ ಅಂಗಡಿಯಲ್ಲಿ ನಿಂತಿದ್ದ ಹುಡುಗನ ಮೇಲೆ ಆ್ಯಸಿಡ್ ಎರಚಿದ್ದಾಳೆ. ಈ ಮಾಹಿತಿ ನೀಡಿದ್ದು ಹುಡುಗನ ತಾಯಿ ರುಕ್ಸಾನಾ.

ಆದರೆ, ಈ ಘಟನೆಗೆ ಮತ್ತೊಂದು ಕೋನವೂ ಇದೆ. ಅದೆಂದರೆ, ತನ್ನನ್ನು ಮದುವೆಯಾಗದಿದ್ದರೆ, ನಿನ್ನ ಜತೆಗಿದ್ದ ಆತ್ಮೀಯ ಕ್ಷಣಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬಯಲು ಮಾಡುವುದಾಗಿ ಈ ಹುಡುಗನೇ ಬೆದರಿಕೆಯೊಡ್ಡಿದ್ದನಂತೆ. ಇಬ್ಬರಿಗೂ ಮದುವೆಯಾಗಬೇಕೆಂಬ ಮನಸ್ಸಿದ್ದರೆ, ನಡುವೆ ಬೆದರಿಕೆ, ಆ್ಯಸಿಡ್ ಹೇಗೆ ಬಂತೆಂಬುದು ಯಕ್ಷ ಪ್ರಶ್ನೆ.

ಒಟ್ಟಿನಲ್ಲಿ ಆ್ಯಸಿಡ್ ದಾಳಿಯಿಂದಾಗಿ ಫೈಜಾದ್ ಹೆಸರಿನ ಈ ಯುವಕನ ಕಣ್ಣಿಗೆ ತೀರಾ ಹಾನಿಯಾಗಿದೆ. ಚಿಕಿತ್ಸೆ ಮುಂದುವರಿದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು