ಸೋಮವಾರ, ಜನವರಿ 27, 2020
20 °C

ಫೋನ್ ಇದೆಯಾ? ಹಾಗಾದರೆ ಪೌರತ್ವ ಕಾಯ್ದೆ ಬೆಂಬಲಿಸಲು ಕರೆ ಮಾಡಿ: ಅಮಿತ್ ಶಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Amit Shah

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವಾಗ ಈ ಕಾಯ್ದೆಯನ್ನು ಬೆಂಬಲಿಸಲು 8866288662 ಎಂಬ ಸಂಖ್ಯೆ ಡಯಲ್ ಮಾಡಿ ಎಂದು ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ.

ಸೋಮವಾರ ನವದೆಹಲಿಯಲ್ಲಿ ದೆಹಲಿ ಸೈಕಲ್‌ವಾಕ್‌ಗೆ  ಶಂಕು ಸ್ಥಾಪನೆ ಮಾಡಿ ಜನರನ್ನುದ್ದೇಶಿಸಿ ಮಾತನಾಡಿದ ಶಾ, ಈ  ಸಂಖ್ಯೆಗೆ ಡಯಲ್ ಮಾಡುವ  ಮೂಲಕ ನೀವು ನೇರವಾಗಿ ಪ್ರಧಾನಿ ನರೇಂದ್ರ  ಮೋದಿಗೆ ಬೆಂಬಲ ನೀಡಿದಂತಾಗುತ್ತದೆ ಎಂದಿದ್ದಾರೆ.

 ಮತಬ್ಯಾಂಕ್‌ಗಾಗಿ ದೇಶದಲ್ಲಿರುವವರು ಎಲ್ಲರೂ ಮೋದಿಯವರನ್ನು ದ್ವೇಷಿಸುತ್ತಿದ್ದಾರೆ ಎಂಬಂತಿರುವ ವಾತಾವರಣವನ್ನು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಸೃಷ್ಟಿಸಿದೆ. ರಾಹುಲ್ ಬಾಬಾ (ರಾಹುಲ್ ಗಾಂಧಿ) ಮೈಕ್‌ನಲ್ಲಿ ಮಾತನಾಡುವುದಕ್ಕಿಂತ  ಮೊಹಲ್ಲಾಗಳಿಗೆ ಹೋಗಿ ಯಾರಿಗೆ ಹೆಚ್ಚು ಬೆಂಬಲ ಇದೆ ಎಂಬುದನ್ನು ತಿಳಿದುಕೊಳ್ಳಲಿ ಎಂದಿದ್ದಾರೆ.

ಇದನ್ನೂ ಓದಿ: ಅಮಿತ್ ಶಾ ಭೇಟಿ ವಿರೋಧಿಸಿ ದಕ್ಷಿಣ ಕನ್ನಡದಲ್ಲಿ ‘ಗೋ ಬ್ಯಾಕ್’ ಚಳವಳಿ

ಭಾಷಣದ ಮಧ್ಯೆ ಮಿಸ್ಡ್ ಕಾಲ್ ಅಭಿಯಾನದ ಬಗ್ಗೆ ಮಾತನಾಡಿದ ಶಾ,  ಇಲ್ಲಿ ನೆರೆದಿರುವ ಗೆಳೆಯರಲ್ಲಿ ಮೊಬೈಲ್ ಫೋನ್ ಇದೆಯಾ? ಕೈಯೆತ್ತ ಬೇಡಿ,  ನೀವು ಮೊಬೈಲ್ ಫೋನ್ ತೋರಿಸಿ. ಎಲ್ಲರಲ್ಲೂ ಮೊಬೈಲ್  ಫೋನ್ ಇದೆಯಲ್ಲವೇ.  ಈಗ ನಾನು 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು ಹೇಳುತ್ತೇನೆ. 8866288662 ಈ ಸಂಖ್ಯೆ ಡಯಲ್ ಮಾಡಿ ನಿಮ್ಮ ಬೆಂಬಲವನ್ನು ಮೋದಿಯವರಿಗೆ ತಿಳಿಸಿ ಎಂದು ಹೇಳಿದ್ದಾರೆ.

ಫೋನ್ ಸಂಖ್ಯೆಯನ್ನು ಪುನರಾವರ್ತಿಸಿದ ಶಾ , ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಲು ನಿಮ್ಮ ಗೆಳೆಯರು, ಕುಟುಂಬ ಮತ್ತು ಸಂಬಂಧಿಕರಿಗೆ ಹೇಳಿ ಎಂದಿದ್ದಾರೆ. ಈ ಮಿಸ್ಡ್ ಕಾಲ್ ಅಭಿಯಾನ  ಮತ ಬ್ಯಾಂಕ್  ರಾಜಕಾರಣಕ್ಕಾಗಿ  ಮತ ನೀಡುವವರ ಕಣ್ಣು ತೆರೆಸಲಿದೆ. ಎರಡು ದಿನಗಳಲ್ಲಿ ಮಿಸ್ಡ್ ಕಾಲ್ ನೀಡಿದ ಫೋನ್ ಸಂಖ್ಯೆಗಳು 50 ಲಕ್ಷ  ದಾಟಲಿದೆ ಎಂದಿದ್ದಾರೆ ಅಮಿತ್ ಶಾ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು