ಸೋಮವಾರ, ಜನವರಿ 27, 2020
16 °C

ಅಮೃತಾ, ಪ್ರಿಯಾಂಕಾ ಟ್ವೀಟ್ ಸಮರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್‌ ಅವರ ಪತ್ನಿ ಅಮೃತಾ ಮತ್ತು ಶಿವಸೇನಾ ಉಪನಾಯಕಿ ಪ್ರಿಯಾಂಕಾ ಚತುರ್ವೇದಿ ನಡುವಣ ಟ್ವೀಟ್‌ ವಾಕ್ಸಮರ ಮಹಾರಾಷ್ಟ್ರ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಟ್ವೀಟ್‌ಗಳ ಮೂಲಕವೇ ಇಬ್ಬರು ಪರಸ್ಪರ ಕಾಲೆಳೆಯುವಿಕೆಯು ರಾಜ್ಯದಲ್ಲಿ ಉಭಯ ಪಕ್ಷಗಳ ನಡುವೆ ನಡೆದಿರುವ ಶೀತಲ ಸಮರಕ್ಕೂ ಸಾಕ್ಷಿಯಾಗಿದೆ.

‘ನಾನು ರಾಹುಲ್‌ ಸಾವರ್ಕರ್ ಅಲ್ಲ’ ಎಂಬ ರಾಹುಲ್‌ಗಾಂಧಿ ಹೇಳಿಕೆ ಉಲ್ಲೇಖಿಸಿ ದೇವೇಂದ್ರ ಫಡಣವೀಸ್‌ ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಅಮೃತಾ, ಠಾಕ್ರೆ ಹೆಸರನ್ನು ಗುರಿಯಾಗಿಸಿ ಮಾಡಿದ್ದ ಟ್ವೀಟ್‌ ಇದಕ್ಕೆ ನಾಂದಿಯಾಯಿತು.

‘ನಿಜ, ಫಡಣವಿಸ್‌ಜೀ. ಠಾಕ್ರೆ ಉಪನಾಮ ಇಟ್ಟುಕೊಂಡಾಕ್ಷಣ ಯಾರೊಬ್ಬರೂ ಠಾಕ್ರೆ ಆಗಲಾರರು. ತತ್ವ, ಸಿದ್ಧಾಂತಕ್ಕೆ ಬದ್ಧರಾಗಿ, ಕುಟುಂಬದ ಹಿತಾಸಕ್ತಿ ಮೀರಿ ಜನರು, ಕಾರ್ಯಕರ್ತರ ಪ್ರಗತಿಗೆ ಶ್ರಮಿಸಬೇಕು’ ಎಂದು ಅಮೃತಾ ಹೇಳಿದ್ದರು. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದ ಪ್ರಿಯಾಂಕಾ, ‘ಠಾಕ್ರೆ ತಮ್ಮ ಉಪನಾಮಕ್ಕೆ ಅನುಗುಣವಾಗಿ ಬದುಕುತ್ತಿದ್ದಾರೆ. ವೃತ್ತಿಯಿಂದ ಬ್ಯಾಂಕರ್ ಆಗಿರುವ ಅಮೃತಾ ರಾಜ್ಯದ ಬೆಳವಣಿಗೆಗಳನ್ನೇ ಗಮನಿಸುತ್ತಿಲ್ಲ’ ಎಂದಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು