ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌ನಲ್ಲಿ ಮತ್ತೊಂದು ಅತ್ಯಾಚಾರ, ಕೊಲೆ ಪ್ರಕರಣ

Last Updated 30 ನವೆಂಬರ್ 2019, 3:48 IST
ಅಕ್ಷರ ಗಾತ್ರ

ಹೈದರಾಬಾದ್‌: ಶಂಶಾದ್‌ಬಾದ್‌ನಲ್ಲಿ ನಡೆದ ಪಶು ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಹೋಲಿಕೆ ಇರುವ ಮತ್ತೊಂದು ಪ್ರಕರಣ ಅದೇ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ. 35 ವರ್ಷದ ಮಹಿಳೆಯದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅತ್ಯಾಚಾರ ನಡೆಸಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.

ಶಂಶಾದ್‌ಬಾದ್‌ನಲ್ಲಿರುವ ತೊಂಡುಪಲ್ಲಿಟೋಲ್‌ ಪ್ಲಾಜಾದ ಬಳಿ ನಡೆದಿರುವ ಘಟನೆ ಪಶು ವೈದ್ಯೆಪ್ರಕರಣದ ಮಾದರಿಯಲ್ಲೇ ಇದೆಎಂದು ಪೊಲೀಸರು ತಿಳಿಸಿದ್ದಾರೆ. 35 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಆ ನಂತರ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಒಂದೇ ಪ್ರದೇಶದಲ್ಲಿ ನಡೆದಿರುವ ಈ ಎರಡು ಪ್ರಕರಣಗಳು ದೇಶವನ್ನು ಬೆಚ್ಚಿ ಬೀಳಿಸಿವೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ತೆಲಂಗಾಣ ಪೊಲೀಸರು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಎರಡೂ ಪ್ರಕರಣಗಳು ಒಂದೇ ಪ್ರದೇಶದಲ್ಲಿ ನಡೆದದ್ದು, ಅಪರಾಧ ಕೃತ್ಯ ನಡೆಸಿದ ವಿಧಾನಗಳಲ್ಲಿ ಸಾಕಷ್ಟು ಹೋಲಿಕೆಗಳಿವೆ. ಆ ಕಾರಣ, ಪೊಲೀಸರು ಮೊದಲನೆ ಪ್ರಕರಣದಲ್ಲಿ ಬಂಧಿತರಾದವರೇ ಎರಡನೇ ಪ್ರಕರಣದಲ್ಲೂ ಶಾಮೀಲಾಗಿದ್ದಾರಾ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ಮೊದಲು ನಡೆದ ಪಶು ವೈದ್ಯೆ ಪ್ರಕರಣ ದೇಶವನ್ನು ಬೆಚ್ಚಿ ಬೀಳಿಸಿತ್ತು. ಪಶು ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ 26 ವರ್ಷದ ಮಹಿಳೆ ಬುಧವಾರ ರಾತ್ರಿ ತಮ್ಮ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಅವರ ವಾಹನ ಪಂಕ್ಚರ್ ಆಗಿದೆ. ಆ ವಿಚಾರವಾಗಿ ಬುಧವಾರ ರಾತ್ರಿ 9:15 ಸುಮಾರಿಗೆ ವೈದ್ಯೆ ತಮ್ಮ ಸಹೋದರಿಗೆ ಪೋನ್‌ ಕರೆಮಾಡಿ ಮಾತನಾಡಿದ್ದು, ತಾವು ಟೋಲ್ ಗೇಟ್‌ ಒಂದರ ಬಳಿ ಇರುವುದಾಗಿ ಹೇಳಿದ್ದರು. ‘ಇಲ್ಲಿ ಅಪರಿಚಿತ ಗಂಡಸರು ಮತ್ತು ಬಹಳಷ್ಟು ಟ್ರಕ್‌ಗಳು ನಿಂತಿವೆ. ನನಗೆ ಭಯವಾಗುತ್ತಿದೆ,’ ಎಂದು ಸಹೋದರಿಗೆ ತಿಳಿಸಿದ್ದರು. ಅದಕ್ಕೆ ಸಹೋದರಿಯು, ‘ಟೋಲ್‌ ಗೇಟ್‌ ಬಳಿ ವಾಹನ ಬಿಟ್ಟು ಹೋಗು,’ ಎಂದಿದ್ದರು. ಆಗ ವೈದ್ಯೆಯು ವಾಹನ ಸರಿಪಡಿಸಲು ಕೆಲ ಅಪರಿಚಿತ ವ್ಯಕ್ತಿಗಳು ಸಹಾಯಕ್ಕೆ ಬಂದಿದ್ದಾರೆ ಎಂದು ಹೇಳಿ ಕರೆ ಕಡಿತಗೊಳಿಸಿದ್ದರು. ಅದಾದ ಕೆಲ ನಿಮಿಷಗಳಲ್ಲಿ ಸಹೋದರಿಯು ವೈದ್ಯೆಗೆ ಮತ್ತೆ ಕರೆ ಮಾಡಿದಾಗ ಫೋನ್‌ ಸ್ವಿಚ್‌ ಆಫ್‌ ಆಗಿತ್ತು ಎಂದು ತಿಳಿದುಬಂದಿತ್ತು.

ಬುಧವಾರ ರಾತ್ರಿ ನಾಪತ್ತೆಯಾದ ವೈದ್ಯೆ ಗುರುವಾರ ಸಂಜೆ ಶವವಾಗಿ ಪತ್ತೆಯಾಗಿದ್ದರು. ದೇಹವನ್ನು ಪೆಟ್ರೋಲ್‌ ಸುರಿದು ಸುಟ್ಟು ಹಾಕಲಾಗಿತ್ತು, ದೇಹದ ಮೇಲಿದ್ದ ಲಾಕೆಟ್‌ ವೈದ್ಯೆಯ ಗುರುತಿಗೆ ಸಹಾಯ ಮಾಡಿತ್ತು

ಘಟನೆ ನಡೆದ ಪ್ರದೇಶದಲ್ಲಿದ್ದ ಸಿಸಿಟಿವಿ ದೃಶ್ಯಾವಳಿ ಮತ್ತು ತಾಂತ್ರಿಕ ಸಾಕ್ಷ್ಯಗಳ ಮೂಲಕ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT