ಬುಧವಾರ, ಜನವರಿ 29, 2020
24 °C

ಗಣರಾಜ್ಯೋತ್ಸವ ಪರೇಡ್‌ನಲ್ಲಿ‘ಅಪಾಚೆ’, ‘ಚಿನೂಕ್‌’ ಆಕರ್ಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ವಾಯುಪಡೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ‘ಅಪಾಚೆ’ ಮತ್ತು ‘ಚಿನೂಕ್‌’ ಹೆಲಿಕಾಪ್ಟರ್‌ಗಳು ಈ ಬಾರಿಯ ಗಣರಾಜ್ಯೋತ್ಸವದ ಪಥ ಸಂಚಲನದ ಪ್ರಮುಖ ಆಕರ್ಷಣೆಯಾಗಿವೆ ಎಂದು ವಾಯುಪಡೆ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. 

‘ಅಪಾಚೆ’ ಅತ್ಯಾಧುನಿಕ ಬಹೂಪಯೋಗಿ ಯುದ್ಧ ಹೆಲಿಕಾಪ್ಟರ್ ಆಗಿದ್ದು, ದಾಳಿ ಹೆಲಿಕಾಪ್ಟರ್‌ಗಳಲ್ಲಿಯೇ ಶಕ್ತಶಾಲಿಯಾಗಿದೆ. ‘ಚಿನೂಕ್’ ಅತಿ ಭಾರದ ಸರಕು, ಶಸ್ತ್ರಾಸ್ತ್ರಗಳನ್ನು ಒಯ್ಯುವ ಭಾರಿ ಹೆಲಿಕಾಪ್ಟರ್‌ ಆಗಿದೆ. ಇತ್ತೀಚೆಗೆ ಸೇರ್ಪಡೆಗೊಂಡಿರುವ ಈ ಹೆಲಿಕಾಪ್ಟರ್‌ಗಳು ವಾಯುಪಡೆಗೆ ಬಲತುಂಬಿವೆ ಎಂದು ಹಿರಿಯ ಐಎಎಫ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು