ಇಟಾನಗರ: ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ ಹೊಸ ಪ್ರಭೇದದ ಹಾವು ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಷಪೂರಿತ ಕೆಂಪು ಮತ್ತು ಕಂದು ಬಣ್ಣದ ಗುಳಿ ಮಂಡಲ ಹಾವನ್ನು (ಪಿಟ್ ವೈಪರ್) ಕಮೆಂಗ್ ಜಿಲ್ಲೆಯ ಅರಣ್ಯದಲ್ಲಿ ಅಶೋಕ್ ಕ್ಯಾಪ್ಟನ್ ನೇತೃತ್ವದ ಉರಗತಜ್ಞರ ತಂಡ ಪತ್ತೆಹಚ್ಚಿದೆ ಎಂದು ಹೇಳಿದ್ದಾರೆ.
ಈ ಹಾವು ವಿಶಿಷ್ಟ ಶಾಖ ಸಂವೇದನೆಯನ್ನು ಹೊಂದಿದೆ ಎಂದು ಉರಗತಜ್ಞರು ತಿಳಿಸಿದ್ದಾರೆ.
‘ರಷ್ಯನ್ ಜರ್ನಲ್ ಆಫ್ ಹರ್ಪೆಟಾಲಜಿ‘ಯ ಮಾರ್ಚ್ –ಏಪ್ರಿಲ್ ಸಂಚಿಕೆಯಲ್ಲಿ ಈ ಕುರಿತು ಲೇಖನ ಪ್ರಕಟವಾಗಿದೆ.
ಈ ಪ್ರಭೇದದ ಹಾವನ್ನು ಪತ್ತೆಹಚ್ಚುವ ಮೊದಲು ಭಾರತದಲ್ಲಿ ಕಂದು ಬಣ್ಣದ ಗುಳಿ ಮಂಡಲ ಹಾವಿನ ನಾಲ್ಕು ಪ್ರಭೇದಗಳನ್ನು ಗುರುತಿಸಲಾಗಿತ್ತು. ಅವು ಮಲಬಾರ್, ಹಾರ್ಸ್‌ಶೂ, ಹಂಪ್ ನೋಸ್ಡ್ ಮತ್ತು ಹಿಮಾಲಯನ್ ಎಂದು ಅಶೋಕ್ ಕ್ಯಾಪ್ಟನ್ ತಿಳಿಸಿದ್ದಾರೆ.
ಹೊಸ ಪ್ರಭೇದದ ಹಾವಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಈಗ ಗಂಡು ಹಾವನ್ನು ಪತ್ತೆಹಚ್ಚಲಾಗಿದೆ. ಇಂತಹ ಹಾವುಗಳ ಪತ್ತೆಗೆ ಇನ್ನೂ ಹೆಚ್ಚಿನ ಸಮೀಕ್ಷೆ ನಡೆಯಬೇಕಾಗಿದೆ ಎಂದೂ ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರೀಸರ್ಚ್‌ನ (ಐಐಎಸ್‌ಇಆರ್) ಅಧೀನದಲ್ಲಿ ಸಮೀಕ್ಷೆ ಕಾರ್ಯ ನಡೆದಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.