ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ದಿನಾಚರಣೆ: 370ನೇ ವಿಧಿ ರದ್ದತಿ ಐತಿಹಾಸಿಕ ಎಂದ ಸೇನಾ ಮುಖ್ಯಸ್ಥ ನರವಾಣೆ

ರಾಷ್ಟ್ರಪತಿ, ಪ್ರಧಾನಿ ಸೇರಿ ವಿವಿಧ ಗಣ್ಯರಿಂದ ಯೋಧರಿಗೆ ಗೌರವ
Last Updated 15 ಜನವರಿ 2020, 7:15 IST
ಅಕ್ಷರ ಗಾತ್ರ

ನವದೆಹಲಿ:ಸಂವಿಧಾನದ 370ನೇ ವಿಧಿ ರದ್ದತಿಯು ಐತಿಹಾಸಿಕ ಹೆಜ್ಜೆ.ಈ ಕ್ರಮವು ಪಾಕಿಸ್ತಾನದ ಛಾಯಾಸಮರಕ್ಕೆ ಅಡ್ಡಿಪಡಿಸಿದೆ ಎಂದು ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಹೇಳಿದರು.

72ನೇ ಸೇನಾ ದಿನಾಚರಣೆ ಪ್ರಯುಕ್ತ ದೆಹಲಿಯ ಕಾರ್ಯಪ್ಪ ಪರೇಡ್ ಮೈದಾನದಲ್ಲಿ ಮಾತನಾಡಿದ ಅವರು, ‘ಭಯೋತ್ಪಾದನೆಯನ್ನು ಸಹಿಸಲಾಗದು’ ಎಂದು ಹೇಳಿದರು.

‘ಭಯೋತ್ಪಾದನೆಗೆ ಕುಮ್ಮಕ್ಕು ನೀಡುವವರಿಗೆ ತಿರುಗೇಟು ನೀಡಲು ನಮ್ಮ ಬಳಿ ಹಲವು ಆಯ್ಕೆಗಳಿವೆ. ಅವುಗಳನ್ನು ಬಳಸಲು ನಾವು ಹಿಂಜರಿಯುವುದಿಲ್ಲ’ ಎಂದೂ ಅವರು ಹೇಳಿದರು.

ಇದನ್ನೂ ಓದಿ...

ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಗಣ್ಯರಿಂದ ಯೋಧರಿಗೆ ಗೌರವ

ಸೇನಾ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ವೀರ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.

‘ಭಾರತೀಯ ಸೇನೆಯ ವೀರ ಪುರುಷ, ಮಹಿಳಾ ಯೋಧರಿಗೆ ಮತ್ತು ಅವರ ಕುಟುಂಬದವರಿಗೆ ಶುಭಾಶಯಗಳು. ನೀವು ನಮ್ಮ ರಾಷ್ಟ್ರದ ಹೆಮ್ಮೆ. ನಮ್ಮ ಸ್ವಾತಂತ್ರ್ಯದ ರಕ್ಷಕರು. ನಿಮ್ಮ ತ್ಯಾಗವು ನಮ್ಮ ಸಾರ್ವಭೌಮತ್ವವನ್ನು ಭದ್ರಪಡಿಸಿದೆ, ನಮ್ಮ ದೇಶಕ್ಕೆ ವೈಭವ ತಂದಿದೆಹಾಗೂ ನಮ್ಮ ಜನರನ್ನು ರಕ್ಷಿಸಿದೆ. ಜೈ ಹಿಂದ್!’ ಎಂದು ಕೋವಿಂದ್ ಟ್ವೀಟ್ ಮಾಡಿದ್ದಾರೆ.

‘ನಮ್ಮ ಸೇನೆಯು ಶೌರ್ಯ ಮತ್ತು ವೃತ್ತಿಪರತೆಗೆ ಪ್ರಸಿದ್ಧವಾಗಿದೆ. ಸೇನೆಯ ಮಾನವೀಯತೆಯೂ ಗೌರವಕ್ಕೆ ಪಾತ್ರವಾಗಿದೆ. ಜನರಿಗೆ ನೆರವು ಬೇಕಿದ್ದಂತಹ ಸಂದರ್ಭದಲ್ಲಿ ಏನೆಲ್ಲ ಸಾಧ್ಯವೋ ಅದನ್ನೆಲ್ಲ ಸೇನೆ ಮಾಡಿದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ವಿಡಿಯೊ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT