ಶುಕ್ರವಾರ, ಜೂನ್ 5, 2020
27 °C

ಕೋವಿಡ್ ವಿರುದ್ಧದ ಹೋರಾಟಕ್ಕೆ ಸೇನಾಪಡೆಯ 'ಆಪರೇಷನ್ ನಮಸ್ತೆ' ಸಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Naravane

ನವದೆಹಲಿ: ಕೋವಿಡ್ -19  ಜಾಗತಿಕ ಪಿಡುಗು ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಸಹಾಯ ಮಾಡಲು ಭಾರತೀಯ ಸೇನೆ ಆಪರೇಷನ್ ನಮಸ್ತೆ ಎಂಬ ಅಭಿಯಾನ ಆರಂಭಿಸಿದೆ.  ಭಾರತೀಯ ಸೇನೆ ಇದನ್ನು ಆ್ಯಂಟಿ ಕೋವಿಡ್ 19 ಎಂದು ಕರೆಯುತ್ತಿದ್ದು, ಈ ಮೂಲಕ ದೇಶದಲ್ಲಿ 8 ಕ್ವಾರಂಟೈನ್ ಸೌಲಭ್ಯಗಳನ್ನು ಒದಗಿಸಿದೆ.
  
ನಿಮ್ಮ ಆಪ್ತರ  ಬಗ್ಗೆ ಯಾವ ರೀತಿಯ ಆತಂಕವೂ ಬೇಡ, ಪರಾಕ್ರಮ್ ಕಾರ್ಯಾಚರಣೆ ವೇಳೆಯೂ ರಜೆ ರದ್ದು ಮಾಡುವ ಪರಿಸ್ಥಿತಿ ಬಂದಿತ್ತು. ಈ ಕಾರ್ಯಾಚರಣೆಯನ್ನು ಸೇನೆ ಯಶಸ್ವಿಯಾಗಿ ನಿಭಾಯಿಸಿತ್ತು. ಅದೇ ರೀತಿ ಆಪರೇಷನ್ ನಮಸ್ತೆ ಕೂಡಾ ಯಶಸ್ವಿಯಾಗುತ್ತದೆ ಎಂದು ಸೇನೆಯ ಮುಖ್ಯಸ್ಥ ಎಂ.ಎಂ ನರವಣೆ ಸೇನಾ ಸಿಬ್ಬಂದಿಗಳಿಗೆ ಭರವಸೆ ನೀಡಿದ್ದಾರೆ.
 

ಏನಿದು ಆಪರೇಷನ್ ನಮಸ್ತೆ ಅಭಿಯಾನ

ಮಾರ್ಚ್ 27ರಂದು ಆರಂಭವಾದ ಈ ಅಭಿಯಾನದ ಮೂಲಕ ಸೇನೆಯು ಸಹಾಯವಾಣಿ ಆರಂಭಿಸಿದೆ. ತುರ್ತು ಸಂದರ್ಭಗಳಲ್ಲಿ ಯೋಧರ ಕುಟಂಬವು ಹತ್ತಿರದಲ್ಲಿರುವ ಸೇನಾ ಶಿಬಿರಕ್ಕೆ ಭೇಟಿ ನೀಡಲಿರುವ ಸೌಕರ್ಯ ಒದಗಿಸಲಾಗಿದೆ. ಯುದ್ಧ ತಂತ್ರ ಮತ್ತು ಕಾರ್ಯಾಚರಣೆಯ ಸಲುವಾಗಿ ಯೋಧರು ಸಾಮಾಜಿಕ  ಅಂತರ  ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ದೇಶದ ರಕ್ಷಣೆಗಾಗಿ ತಮ್ಮನ್ನು ತಾವು ಸುರಕ್ಷಿತ ಮತ್ತು ಆರೋಗ್ಯಕರವಾಗಿರಿಸಲೇಬೇಕು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ನಾವು ಯೋಧರು ಪಾಲಿಸಲೇ ಬೇಕಾದ ಎರಡು ಮೂರು ಸೂಚನೆಗಳನ್ನು ಕಳೆದ ವಾರವೇ ನೀಡಿದ್ದೆವು ಅಂದಿದ್ದಾರೆ ನರವಣೆ.

ಸೇನಾ ಮುಖ್ಯಸ್ಥನಾಗಿರುವ ನನಗೆ ನಮ್ಮ  ಸೇನಾಪಡೆಯನ್ನು ಸುರಕ್ಷಿತ ಮತ್ತು ಆರೋಗ್ಯಕರವಾಗಿರಿಸುವ ಹೊಣೆ ಇದೆ.  ಕೊರೊನಾ ವೈರಸ್‌ನಿಂದ ನಮ್ಮನ್ನು ನಾವೇ ರಕ್ಷಿಸಿಕೊಂಡರೇ ಮಾತ್ರ ದೇಶದ ಸೇವೆ ಮಾಡಲು ನಮ್ಮಿಂದ ಸಾಧ್ಯ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು