ಭಾನುವಾರ, ಜೂಲೈ 5, 2020
27 °C

ಗಡಿಯಲ್ಲಿ ಚಟುವಟಿಕೆ ಹೆಚ್ಚಳ: ಭಾರತ–ಚೀನಾ ಸೇನಾ ಪಡೆಗಳಿಂದ ಶಸ್ತ್ರಾಸ್ತ್ರಗಳ ರವಾನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಲಡಾಖ್‌ನ ಪೂರ್ವ ಭಾಗದಲ್ಲಿನ ವಿವಾದಿತ ಪ್ರದೇಶದ ಸಮೀಪದ ನೆಲೆಗಳಲ್ಲಿ ಭಾರತ ಮತ್ತು ಚೀನಾ ಸೇನಾ ಪಡೆಗಳು, ಯುದ್ಧ ವಾಹನಗಳು ಹಾಗೂ ಭಾರಿ ಉಪಕರಣಗಳನ್ನು ನಿಯೋಜಿಸಿವೆ.

ಗಡಿ ವಿವಾದವನ್ನು ಸೇನೆ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಇತ್ಯರ್ಥಗೊಳಿಸುವುದಾಗಿ ಉಭಯ ದೇಶಗಳು ಹೇಳಿಕೆ ನೀಡಿವೆ. ಹಾಗಿದ್ದರೂ ಗಡಿಯಲ್ಲಿ ಸೇನಾ ಚಟುವಟಿಕೆ ಬಿರುಸುಗೊಂಡಿರುವುದಾಗಿ ವರದಿಯಾಗಿದೆ.

ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಸಮೀಪದ ನೆಲೆಗಳಿಗೆ ಯುದ್ಧ ವಾಹನಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು 
ಚೀನಾ ಸಾಗಿಸಿದೆ. ಇದಕ್ಕೆ ಸರಿಸಮಾನವಾದ ರೀತಿಯಲ್ಲಿಯೇ ಭಾರತೀಯ ಸೇನೆ ಕೂಡ ಸಿದ್ಧತೆಗಳನ್ನು ಮಾಡಿದೆ.

ವಿವಾದಿತ ಪ್ರದೇಶದ ಮೇಲೆ ಭಾರತೀಯ ವಾಯು ಪಡೆ ಸಹ ನಿರಂತರವಾಗಿ ನಿಗಾ ವಹಿಸಿದೆ.

ವಿಡಿಯೊ ನೈಜವಲ್ಲ: ಸೇನೆ ಸ್ಪಷ್ಟನೆ
ಪೂರ್ವ ಲಡಾಖ್‌ನಲ್ಲಿ ಚೀನಾ ಮತ್ತು ಭಾರತ ಸೇನೆಗಳ ನಡುವೆ ಘರ್ಷಣೆ ನಡೆದಿದೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೊ ನೈಜವಾದುದಲ್ಲ. ಅಂಥ ಘಟನೆ ನಡೆದಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. 

‘ಹರಿದಾಡುತ್ತಿರುವ ವಿಡಿಯೊ ವಾಸ್ತವವಲ್ಲ. ಸದ್ಯ ಗಡಿಯಲ್ಲಿ ಇರುವ ಸನ್ನಿವೇಶಕ್ಕೆ ಸಂಪರ್ಕ ಕಲ್ಪಿಸಿ ವಿಡಿಯೊವನ್ನು ತಿರುಚಲಾಗಿದೆ’ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು