ರಾಹುಲ್ ಪ್ರಚಾರ ಮಾಡುತ್ತಿರುವುದು ಕಾಂಗ್ರೆಸ್‌ ಪರವೋ, ಬಿಜೆಪಿ ಪರವೋ: ಶಾ ವ್ಯಂಗ್ಯ

7

ರಾಹುಲ್ ಪ್ರಚಾರ ಮಾಡುತ್ತಿರುವುದು ಕಾಂಗ್ರೆಸ್‌ ಪರವೋ, ಬಿಜೆಪಿ ಪರವೋ: ಶಾ ವ್ಯಂಗ್ಯ

Published:
Updated:

ನರಸಿಂಗ್‌ಪುರ(ಮಧ್ಯಪ್ರದೇಶ): ‘ಪದೇ ಪದೇ ಮೋದಿ ಹೆಸರನ್ನು ಬಳಸುವ ರಾಹುಲ್‌ ಗಾಂಧಿ, ಚುನಾವಣಾ ಪ್ರಚಾರ ಮಾಡುತ್ತಿರುವುದು ಕಾಂಗ್ರೆಸ್‌ ಪರವಾಗಿಯೋ? ಅಥವಾ ಬಿಜೆಪಿ ಪರವಾಗಿಯೋ? ಎಂಬುದು ಅಚ್ಚರಿ ಮೂಡಿಸಿದೆ ಎನ್ನುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಹುಲ್ ಗಾಂಧಿ ಕಾಲೆಳೆದರು.

ಇಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ, ‘ರಾಹುಲ್‌ ಗಾಂಧಿ ಮೋದಿ ಭೀತಿಯಿಂದ ಬಳಲುತ್ತಿದ್ದಾರೆಎಂದ ಶಾ, ‘ಇತ್ತೀಚೆಗೆ ಅವರು ಮಾಡಿದ 22 ನಿಮಿಷಗಳ ಭಾಷಣವೊಂದರಲ್ಲಿ 44 ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನು ಬಳಸಿದ್ದಾರೆ. ಇದರಿಂದ ಅವರು ಪ್ರಚಾರ ಮಾಡುತ್ತಿರುವುದು ಕಾಂಗ್ರೆಸ್‌ ಪರವಾಗಿಯೇ ಅಥವಾ ಬಿಜೆಪಿ ಪರವಾಗಿಯೇ ಎಂದು ಅಚ್ಚರಿ ಗೊಂಡಿದ್ದೇನೆ’ ಎಂದು ವ್ಯಂಗ್ಯವಾಡಿದರು.

‘ರಾಹುಲ್‌ ಗಾಂಧಿಯವರಲ್ಲಿ ಮೋದಿ ಭೀತಿ ಉಲ್ಬಣಿಸಿದೆ. ಅವರ ಪ್ರತಿ ಭಾಷಣದಲ್ಲಿಯೂ ಮೋದಿ ಮೋದಿ ಎನ್ನುತ್ತಾರೆ. ನಾವು ಬಡತನ, ನಿರುದ್ಯೋಗ, ಅನಕ್ಷರತೆಯನ್ನು ದೇಶದಿಂದ ನಿರ್ಮೂಲನೆ ಮಾಡಲು ಬಯಸುತ್ತಿರುವಾಗ, ಅವರು ಮೋದಿ ಅವರನ್ನು ಕೆಳಗಿಳಿಸಲು ಇಚ್ಛಿಸುತ್ತಿದ್ದಾರೆ’ ಎಂದರು.

ದೇಶದ ಅಭಿವೃದ್ಧಿಗಾಗಿ ಮೋದಿ ಅವರು ಶ್ರಮಿಸುತ್ತಿದ್ದಾರೆ. ಶೀಘ್ರದಲ್ಲೇ ಭಾರತವು ಇಂಗ್ಲೆಂಡ್‌ ಆರ್ಥಿಕತೆಯನ್ನು ಹಿಂದಿಕ್ಕಿ, ವಿಶ್ವದ ಐದನೇ ಬೃಹತ್‌ ಆರ್ಥಿಕತೆ ಹೊಂದಿದ ದೇಶ ಎನಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್‌ 28ರಂದು ಮತದಾನ ನಡೆಯಲಿದೆ. ಡಿಸೆಂಬರ್‌ 11ರಂದು ಫಲಿತಾಂಶ ಪ್ರಕಟವಾಗಲಿದೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !