ಬುಧವಾರ, ಆಗಸ್ಟ್ 21, 2019
28 °C
ವರದಿ ಸಲ್ಲಿಸಿದ ಮಧ್ಯಸ್ಥಿಕೆ ಸಮಿತಿ

ಅಯೋಧ್ಯೆ: ಇಂದು ನಿರ್ಧಾರ

Published:
Updated:

ನವದೆಹಲಿ: ಅಯೋಧ್ಯೆಯ ರಾಮಜನ್ಮ ಭೂಮಿ–ಬಾಬರಿ ಮಸೀದಿ ನಿವೇಶನ ವಿವಾದ ಇತ್ಯರ್ಥಕ್ಕಿರುವ ಮಾರ್ಗಗಳನ್ನು ಹುಡುಕಲು ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಐ.ಖಲೀಫುಲ್ಲಾ ನೇತೃತ್ವದ ಮಧ್ಯಸ್ಥಿಕೆ ಸಮಿತಿಯು ಸುಪ್ರೀಂ ಕೋರ್ಟ್‌ಗೆ ಗುರುವಾರ ವರದಿ ಸಲ್ಲಿಸಿತು.

ಪ್ರಕರಣದ ಮುಂದಿನ ಕ್ರಮಗಳ ಬಗ್ಗೆ ಶುಕ್ರವಾರ ನಿರ್ಧಾರ ತೆಗೆದುಕೊಳ್ಳು ವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ. ಮಧ್ಯಾಹ್ನ 2 ಗಂಟೆಗೆ ಐವರು ನ್ಯಾಯಮೂರ್ತಿಗಳ ಪೀಠ ಸಭೆ ಸೇರಲಿದೆ.

ಆರ್ಟ್ ಆಫ್ ಲಿವಿಂಗ್‌ನ ಶ್ರೀಶ್ರೀ ರವಿಶಂಕರ್, ವಕೀಲ ಶ್ರೀರಾಮ್ ಪಂಚು ಅವರು ಸಮಿತಿಯ ಇತರ ಸದಸ್ಯರು. ಈ ಸಮಿತಿಯ ವರದಿಯಲ್ಲಿರುವ ಅಂಶಗಳ ಆಧಾರದ ಮೇಲೆ ವಿಚಾರಣೆ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಪೀಠ ಹಿಂದೆಯೇ ಹೇಳಿತ್ತು.

Post Comments (+)