'ಉನ್ನಾವೊ ಅತ್ಯಾಚಾರ' ಆರೋಪಿಯನ್ನು ಭೇಟಿ ಮಾಡಿ ಧನ್ಯವಾದ ಹೇಳಿದ ಸಾಕ್ಷಿ ಮಹಾರಾಜ್

ಮಂಗಳವಾರ, ಜೂನ್ 25, 2019
26 °C

'ಉನ್ನಾವೊ ಅತ್ಯಾಚಾರ' ಆರೋಪಿಯನ್ನು ಭೇಟಿ ಮಾಡಿ ಧನ್ಯವಾದ ಹೇಳಿದ ಸಾಕ್ಷಿ ಮಹಾರಾಜ್

Published:
Updated:

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದರಾದ ಬಿಜೆಪಿಯ ಸಾಕ್ಷಿ ಮಹಾರಾಜ್ ಉನ್ನಾವೊ ಅತ್ಯಾಚಾರ ಪ್ರಕರಣದ ಆರೋಪಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ನ್ನು ಭೇಟಿ ಮಾಡಿದ್ದಾರೆ. 

ಸೀತಾಪುರ್ ಜಿಲ್ಲಾ ಕಾರಾಗೃಹದಲ್ಲಿ ಕುಲದೀಪ್ ಅವರನ್ನು ಭೇಟಿ ಮಾಡಿದ ಬಿಜೆಪಿ ಸಂಸದ, ಚುನಾವಣೆಯಲ್ಲಿ ಗೆಲ್ಲಿಸಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಿದ್ದಾರೆ.

ಕುಲದೀಪ್ ಸಿಂಗ್ ಸೆಂಗರ್‌ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಜೂನ್ 4, 2017ರಲ್ಲಿ ಕೆಲಸದ ವಿಷಯಕ್ಕಾಗಿ ಭೇಟಿ ಮಾಡಲು ಬಂದ ಮಹಿಳೆಯೊಬ್ಬರನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಕುಲದೀಪ್ ಆರೋಪಿಯಾಗಿದ್ದಾರೆ.

 ಕುಲದೀಪ್  ಜತೆಗಿನ ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಾಕ್ಷಿ ಮಹಾರಾಜ್, ನಮ್ಮ ಯಶಸ್ವಿ ಮತ್ತು ಜನಪ್ರಿಯ ಶಾಸಕ ಇಲ್ಲಿ ಕೆಲವು ಕಾಲಗಳಿಂದ ಇಲ್ಲಿದ್ದಾರೆ. ಚುನಾವಣೆ ನಂತರ ಅವರಿಗೆ ಧನ್ಯವಾದ ಹೇಳೋಣ ಎಂದು ನಾನು ಬಂದೆ ಎಂದಿದ್ದಾರೆ.

ಶಾಸಕನಿಗೆ ಧನ್ಯವಾದ ಹೇಳಲು ಬಂದಿದ್ದೆ ಎಂದ ಸಾಕ್ಷಿ ಮಹಾರಾಜ್, ಅವರಿದೆ ಧನ್ಯವಾದ ಹೇಳಿ ಹೊರಟು ಹೋಗಿದ್ದಾರೆ.ಅವರಿಬ್ಬರ ಭೇಟಿ 2 ನಿಮಿಷಗಳ ಕಾಲ ಇತ್ತು ಎಂದು ಜೈಲಿನ ಅಧಿಕಾರಿ ಡಿ.ಸಿ. ಮಿಶ್ರಾ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 13

  Angry

Comments:

0 comments

Write the first review for this !