ಗುರುವಾರ , ಫೆಬ್ರವರಿ 20, 2020
31 °C

ದೆಹಲಿ ಚುನಾವಣೆ: ಸಿಎಂ ಕೇಜ್ರಿವಾಲ್ ವಿರುದ್ಧ ಯುವ ಅಭ್ಯರ್ಥಿ ಕಣಕ್ಕಿಳಿಸಿದ ಬಿಜೆಪಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಜೆಪಿ ಮಂಗಳವಾರ ಮಧ್ಯರಾತ್ರಿ ಪ್ರಕಟಿಸಿದ್ದು, ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸುನಿಲ್ ಯಾದವ್ ಅವರನ್ನು ಕಣಕ್ಕಿಳಿಸಿದೆ.

ಮಧ್ಯರಾತ್ರಿ 1 ಗಂಟೆಗೆ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ, ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಕೇಜ್ರಿವಾಲ್ ಅವರ ಎದುರಾಳಿಯಾಗಿ ವೃತ್ತಿಯಲ್ಲಿ ವಕೀಲ ಮತ್ತು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿರುವ ಸುನಿಲ್ ಯಾದವ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಯುವ ಮುಖಂಡನನ್ನು ಕಣಕ್ಕಿಳಿಸುವ ಮೂಲಕ ಯುವ ಜನರ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸುನಿಲ್ ಯಾದವ್

ಮೊದಲ ಪಟ್ಟಿಯಿಂದ ಹೊರಗುಳಿದಿದ್ದ ತಾಂಜಿಂದರ್ ಸಿಂಗ್ ಬಗ್ಗ ಅವರು ಟಿಕೆಟ್ ದೊರೆಯದಿದ್ದರಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದರು. ಆದರೆ ರಾತ್ರಿ ಬಿಡುಗಡೆ ಮಾಡಿರುವ ಅಂತಿಮ ಪಟ್ಟಿಯಲ್ಲಿ ತಾಜಿಂದರ್‌ ಸಿಂಗ್‌ ಅವರನ್ನು ಹರಿನಗರ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಮೂಲಗಳ ಪ್ರಕಾರ ಸಿಂಗ್ ಅವರು ತಿಲಕ್ ನಗರದಿಂದ ಸ್ಪರ್ಧಿಸುವ ಇಚ್ಛೆ ಹೊಂದಿದ್ದರು ಆದರೆ ಆ ಕ್ಷೇತ್ರದಿಂದ ಬೇರೊಬ್ಬರಿಗೆ ಟಿಕೆಟ್ ನೀಡಲಾಗಿತ್ತು. 

ತಾಜಿಂದರ್ ಸಿಂಗ್ ಬಗ್ಗ ಅವರು ದೆಹಲಿ ಬಿಜೆಪಿಯ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಶ್ಮೀರದ ಬಗೆಗಿನ ದೃಷ್ಟಿಕೋನಗಳಿಗಾಗಿ ವಕೀಲ ಮತ್ತು ಎಎಪಿ ನಾಯಕರಾದ ಪ್ರಶಾಂತ್ ಭೂಷಣ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪವೂ ಸಿಂಗ್ ಮೇಲಿದೆ.

ಶಾಹ್ದಾರ ವಿದಾನಸಭಾ ಕ್ಷೇತ್ರದಿಂದ ಪಶ್ಚಿಮ ದೆಹಲಿ ನಗರಸಭೆಯ ಮಾಜಿ ಮೇಯರ್ ಸಂಜಯ್ ಗೋಯಲ್, ಧರ್ಮವೀರ್ ಸಿಂಗ್ ಅವರು ಕಲ್ಕಾಜಿ ಸ್ಥಾನದಿಂದ ಸ್ಪರ್ಧಿಸಲಿದ್ದರೆ, ರಮೇಶ್ ಖನ್ನಾ ಅವರನ್ನು ರಜೌರಿ ಗಾರ್ಡನ್‌ನಿಂದ ಕಣಕ್ಕಿಳಿಸಲಾಗಿದೆ. ಪೂರ್ವಾಂಚಲಿ ನಾಯಕ ಮನೀಶ್ ಸಿಂಗ್ ಅವರನ್ನು ದೆಹಲಿ ಕಂಟೋನ್‌ಮೆಂಟ್‌ನಿಂದ, ನಂಗೌಲಿ ಜಾಟ್‌ನಿಂದ ಸುಮಲತಾ ಶೋಕೀನ್, ರವೀಂದ್ರ ಚೌಧರಿ ಅವರನ್ನು ಕಸ್ತೂರ್ಬಾ ಕ್ಷೇತ್ರದಿಂದ, ಕುಸುಮ್ ಖಾತ್ರಿ ಅವರನ್ನು ಮೆಹರೌಲಿ ಮತ್ತು ಕೃಷ್ಣ ನಗರದಿಂದ ಅನಿಲ್ ಗೋಯಲ್ ಅವರನ್ನು ಕಣಕ್ಕಿಳಿಸಲಾಗಿದೆ. 

ಪಕ್ಷವು ಬುರೌರಿ ಮತ್ತು ಸಂಗಮ್ ವಿಹಾರ್ ಕ್ಷೇತ್ರಗಳನ್ನು ಜನತಾ ದಳ(ಯು)ಕ್ಕೆ ಬಿಟ್ಟುಕೊಟ್ಟಿದ್ದರೆ ಮೀಸಲು ಕ್ಷೇತ್ರವಾಗ ಸೀಮಾಪುರಿ ವಿಧಾನಸಭೆ ಕ್ಷೇತ್ರವನ್ನು ಲೋಕತಂತ್ರಿಕ್ ಜನಶಸ್ತಿ ಪಕ್ಷಕ್ಕೆ ನೀಡಿದೆ. ಎಎಪಿಯ ರೆಬೆಲ್ ಶಾಸಕ ಕಪಿಲ್ ಮಿಶ್ರಾ ಮತ್ತು ಬಿಜೆಪಿಯ ಹಿರಿಯ ನಾಯಕ ವಿಜೇಂದರ್ ಗುಪ್ತಾ ಸೇರಿದಂತೆ ಮೊದಲ ಪಟ್ಟಿಯಲ್ಲಿ 57 ಜನರಿಗೆ ಟಿಕೆಟ್ ನೀಡಲಾಗಿತ್ತು. 

70 ಲೋಕಸಭಾ ಕ್ಷೇತ್ರಗಳಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಬಿಜೆಪಿಯು ಇದುವರೆಗೂ 67 ಜನರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಉಳಿದ ಮೂರು ಸೀಟುಗಳಲ್ಲಿ ತನ್ನ ಮೈತ್ರಿ ಪಕ್ಷಗಳಾದ ಎಲ್‌ಜೆಪಿ ಮತ್ತು ಜೆಡಿಯುಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಐಎಎನ್‌ಎಸ್ ವರದಿ ಮಾಡಿದೆ. ಫೆಬ್ರವರಿ 8ಕ್ಕೆ ದೆಹಲಿಯಲ್ಲಿ ಮತದಾನ ನಡೆಯಲಿದ್ದು ಫೆಬ್ರವರಿ 11ಕ್ಕೆ ಮತ ಎಣಿಕೆ ನಡೆಯಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು