ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಹಿಂಸಾಚಾರದಲ್ಲಿ ಮನೆ ಕಳೆದುಕೊಂಡಿದ್ದ ಯೋಧನಿಗೆ ಬಿಎಸ್‌ಎಫ್‌ ನೆರವು

Last Updated 2 ಮಾರ್ಚ್ 2020, 12:21 IST
ಅಕ್ಷರ ಗಾತ್ರ

ನವದೆಹಲಿ:ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮನೆ ಕಳೆದುಕೊಂಡ ಯೋಧಮೊಹಮ್ಮದ್ ಅನೀಸ್‌ಗೆ ಬಿಎಸ್‌ಎಫ್ ₹10 ಲಕ್ಷ ನೆರವು ನೀಡಿದೆ. ಫೆಬ್ರುವರಿ 25ರಂದು ಹಿಂಸಾಚಾರದ ವೇಳೆ ದುಷ್ಕರ್ಮಿಗಳು ಅನೀಸ್ ಮನೆಗೆ ಬೆಂಕಿ ಹಚ್ಚಿದ್ದರು.

ಮನೆ ಕಳೆದುಕೊಂಡಿರುವಅನೀಸ್‌ಗೆ ಸೋಮವಾರ ಬಿಎಸ್‌ಎಫ್ ಮಹಾ ನಿರೀಕ್ಷಕ ಡಿಕೆ ಉಪಾಧ್ಯಾಯ್ ಅವರು ₹10 ಲಕ್ಷ ಮೊತ್ತದ ಚೆಕ್ ನೀಡಿದ್ದಾರೆ.

ಅನೀಸ್ ಅವರ ಮದುವೆ ನಿಗದಿಯಾಗಿದ್ದು, ಮದುವೆ ಸಮಾರಂಭಕ್ಕೆಮನೆಯಲ್ಲಿ ಸಿದ್ದತೆ ನಡೆಯುತ್ತಿದೆ. ಬಿಎಸ್‌ಎಫ್ ಅಧಿಕಾರಿಗಳು ಭಾನುವಾರ ಇವರ ಮನೆಗೆ ಭೇಟಿ ನೀಡಿದ್ದು, ಮನೆನಿರ್ಮಾಣ ಕಾರ್ಯದಲ್ಲಿ ಬಿಎಸ್‌ಎಫ್ ಸಹೋದ್ಯೋಗಿಗಳು ಸಹಾಯ ಮಾಡುತ್ತಿದ್ದಾರೆ.

ನಾಲ್ಕು ದಿನಗಳ ಕಾಲ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿಪೊಲೀಸ್ ಹೆಡ್‌ಕಾನ್‌ಸ್ಟೆಬಲ್‌ ಸೇರಿದಂತೆ 47 ಮಂದಿ ಸಾವಿಗೀಡಾಗಿದ್ದರು. 200ಕ್ಕಿಂತಲೂ ಹೆಚ್ಚು ಮಂದಿಗೆ ಗಾಯಗಳಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT