ಬಜೆಟ್ ಮುಗಿದರೂ ಹಣಕಾಸು ಸಚಿವಾಲಯಕ್ಕೆ ಪತ್ರಕರ್ತರಿಗಿಲ್ಲ ಮುಕ್ತ ಪ್ರವೇಶ

ನವದೆಹಲಿ: ಬಜೆಟ್ ಮಂಡನೆಯಾದ ಬಳಿಕವೂ ದೆಹಲಿಯ ನಾರ್ಥ್ ಬ್ಲಾಕ್‌ನಲ್ಲಿರುವ ಹಣಕಾಸು ಸಚಿವಾಲಯದ ಕಚೇರಿಗೆ ಪತ್ರಕರ್ತರ ಪ್ರವೇಶ ನಿರ್ಬಂಧ ಮುಂದುವರಿಸಲಾಗಿದೆ ಎಂದು ವರದಿಯಾಗಿದೆ.
ಪಿಐಬಿಯಿಂದ (ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ) ಮಾನ್ಯತೆ ಪಡೆದಿರುವ ಪತ್ರಕರ್ತರೂ ಸಹ ಸರ್ಕಾರಿ ಅಧಿಕಾರಿಗಳಿಂದ ಅನುಮತಿ ಪಡೆದರೆ ಮಾತ್ರವೇ ಸದ್ಯ ಹಣಕಾಸು ಸಚಿವಾಲಯ ಪ್ರವೇಶಿಸಲು ಅನುಮತಿ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಪಿಐಬಿಯಿಂದ ಮಾನ್ಯತೆ ಪಡೆದ ಪತ್ರಕರ್ತರಿಗೂ ಸಚಿವಾಲಯ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದು ಇದೇ ಮೊದಲು ಎನ್ನಲಾಗಿದೆ.
ಸಾಮಾನ್ಯವಾಗಿ ಬಜೆಟ್ ಮಂಡನೆಗೂ ಮೊದಲಿನ ಎರಡು ತಿಂಗಳು, ಬಜೆಟ್ ಸಿದ್ಧತೆ ವೇಳೆ ಸಚಿವಾಲಯಕ್ಕೆ ಪತ್ರಪರ್ತರ ಪ್ರವೇಶ ನಿರ್ಬಂಧಿಸಿರಲಾಗುತ್ತದೆ. ಆದರೆ, ಪಿಐಬಿಯಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ಬಜೆಟ್ ಮಂಡನೆಯಾದ ಬಳಿಕ ಸಚಿವಾಲಯಕ್ಕೆ ಮುಕ್ತ ಪ್ರವೇಶವಿದೆ.
ಈ ಮಧ್ಯೆ, ಪತ್ರಕರ್ತರ ನಿರ್ಬಂಧಕ್ಕೆ ಸಂಬಂಧಿಸಿ ಅಧಿಕೃತ ಆದೇಶ ಹೊರಡಿಸಲಾಗಿಲ್ಲ ಎಂದು ಹಣಕಾಸು ಸಚಿವಾಲಯದ ವಕ್ತಾರರು ತಿಳಿಸಿರುವುದಾಗಿ ದಿ ಪ್ರಿಂಟ್ ವರದಿ ಮಾಡಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.