ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿ: ₹93 ಸಾವಿರ ಕೋಟಿ ಅನುದಾನ 

Last Updated 2 ಜುಲೈ 2019, 9:35 IST
ಅಕ್ಷರ ಗಾತ್ರ

ನವದೆಹಲಿ:ಶಿಕ್ಷಣ ಇಲಾಖೆಗೆ ಕಳೆದ ಬಾರಿಯ ಬಜೆಟ್‌ಗಿಂತ ಈ ಬಾರಿ ಶೇ10ರಷ್ಟು ಅನುದಾನ ಹೆಚ್ಚಳ ಮಾಡಲಾಗಿದೆ. 2019–20ರಲ್ಲಿ ₹93,847.64 ಕೋಟಿ ಅನುದಾನ ನೀಡಲಾಗಿದೆ. ಉನ್ನತ ಶಿಕ್ಷಣಕ್ಕೆ ₹37,46.01 ಕೋಟಿ ನೀಡಲಾಗಿದ್ದು, ಪ್ರಾಥಮಿಕ ಶಿಕ್ಷಣಕ್ಕೆ 56,386.63 ಕೋಟಿ ನೀಡಲಾಗಿದೆ.

ಕಳೆದ ಬಾರಿ ಅರುಣ್‌ ಜೇಟ್ಲಿ ಮಂಡಿಸಿದ ಪೂರ್ಣಪ್ರಮಾಣದ ಬಜೆಟ್‌ನಲ್ಲಿ ₹ 85,010 ಕೋಟಿ ಮೀಸಲಿಡಲಾಗಿತ್ತು. ಮೂಲಸೌಕರ್ಯ ಮತ್ತು ಶೈಕ್ಷಣಿಕ ವ್ಯವಸ್ಥೆಯ ಪುನರುಜ್ಜೀವನ–2022 ಯೋಜನೆ ರೂಪಿಸಲಾಗುವುದು ಎಂದು ಹೇಳಿರುವ ಸಚಿವ ಪಿಯೂಷ್‌ ಗೋಯಲ್‌ ಅವರು ,ಅದಕ್ಕಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ ₹1 ಲಕ್ಷ ಕೋಟಿ ವ್ಯಯಿಸಲಾಗುವುದು ಎಂದಿದ್ದಾರೆ.

ಈ ಯೋಜನೆ ಅಡಿಯಲ್ಲಿ ಸಂಶೋಧನೆ, ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆರೋಗ್ಯ ಸಂಬಂಧಿ ಸಂಸ್ಥೆಗಳಿಗೂ ಅನುದಾನ ನೀಡಲಾಗುವುದು ಎಂದಿದ್ದಾರೆ.

ಶೈಕ್ಷಣಿ ಸಂಶೋಧನೆ ಹಾಗೂ ನಾವಿನ್ಯತೆಗೆ ₹608.87 ಕೋಟಿ ನೀಡಲಾಗಿದೆ. ಕಳೆದ ಬಾರಿ ₹350.23 ಕೋಟಿ ನಿಗದಿಪಡಿಸಲಾಗಿತ್ತು. ದೇಶದಲ್ಲಿ ಯೋಜನೆ ಹಾಗೂ ವಿನ್ಯಾಸಕ್ಕೆ ಸಂಬಂಧಿಸಿದ ಎರಡು ಶಾಲೆಗಳನ್ನು ತೆರೆಯುವ ಪ್ರಸ್ತಾವ ಇದೆ ಎಂದು ಹೇಳಿರುವ ಗೋಯಲ್‌, ದೇಶದಲ್ಲಿರುವ 18 ಐಐಟಿ ಹಾಗೂ ಎನ್‌ಐಟಿಗಳಲ್ಲಿ ಯೋಜನೆ ಹಾಗೂ ವಿನ್ಯಾಸ ಕೊರ್ಸ್‌ ಆರಂಭಿಸಲಾಗುವದು ಎಂದೂ ಹೇಳಿದ್ದಾರೆ.

ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ತಂತ್ರಜ್ಞಾನವು ದೊಡ್ಡ ಜಾಲವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನದ ತೀವ್ರತೆಯನ್ನು ಹೆಚ್ಚಿಸಲು ಮುಂದಡಿ ಇಡಲಾಗಿದೆ ಎಂದ ಅವರು ‘ಕಪ್ಪು ಫಲಕದಿಂದ ’ಡಿಜಿಟಲ್ ಬೋರ್ಡ್’ಗೆ ಬದಲಾಗಲು ಇದು ಸಕಾಲ ಎಂದು ಬಣ್ಣಿಸಿದರು.

ಶಿಕ್ಷಕರ ಕೌಶಲಾಭಿವೃದ್ಧಿ ಹೆಚ್ಚಳಕ್ಕೆ ಈಚೆಗೆ ದೀಕ್ಷಾ ಪೋರ್ಟಲ್‌ಗೆ ಚಾಲನೆ ನೀಡಲಾಗಿದೆ ಎಂದ ಸಚಿವರು, ಡಿಜಿಟಲ್ ಹಲಗೆ ಮೂಲಕ ಶಿಕ್ಷಣ ನೀಡಲು ಉನ್ನತ ಶಿಕ್ಷಣ ಇಲಾಖೆ ಈಗಾಗಲೇ ಕಾರ್ಯೋನ್ಮುಖವಾಗಿದೆ ಎಂದಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT