ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ಸೂಟ್‌ಕೇಸ್‌ ಇತಿಹಾಸದ ಬಗ್ಗೆ ಹೇಳುತ್ತೀವಿ ಕೇಳಿ...

Last Updated 5 ಜುಲೈ 2019, 10:08 IST
ಅಕ್ಷರ ಗಾತ್ರ

ನವದೆಹಲಿ:ಕೇಂದ್ರ ಹಾಗೂ ರಾಜ್ಯ ಬಜೆಟ್‌ ಮಂಡನೆಯ ದಿನ ಹಣಕಾಸು ಸಚಿವರು ಬಜೆಟ್‌ ಪುಸ್ತಕಗಳನ್ನು ಹೊಂದಿರುವ ಸೂಟ್‌ಕೇಸ್‌ನೊಂದಿಗೆ ಬರುವುದನ್ನು ನಾವು ಇಲ್ಲಿಯವರೆಗೆ ನೋಡಿದ್ದೇವೆ. ಆದರೆ, ಮೊದಲ ಮಹಿಳಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರುಈ ಬಾರಿ ಕೆಂಪು ವಸ್ತ್ರದಲ್ಲಿ ಬಜೆಟ್‌ ಹೊತ್ತು ತಂದಿದ್ದರು.

ಹಾಗಾದರೆ, ಈ ಬಜೆಟ್‌ ಸೂಟ್‌ಕೇಸ್‌ ಸಂಸ್ಕೃತಿ ಬಂದಿದ್ದಾದರೂ ಎಲ್ಲಿಂದ? ಯಾರು ಇದನ್ನು ಪ್ರಾರಂಭಿಸಿದರು? ಹಿಂದಿನ ವಿತ್ತ ಸಚಿವರು ಯಾವ ರೀತಿ ಬಜೆಟ್‌ ಮಂಡನೆಗೆ ಬಂದಿದ್ದರು ಎನ್ನುವುದರ ಮಾಹಿತಿಯನ್ನು ಈ ಕೆಳಗೆ ವಿವರಿಸಿದ್ದೇವೆ.

ಸ್ವತಂತ್ರ ಭಾರತದ ಮೊದಲ ಕೇಂದ್ರ ಬಜೆಟ್‌ ಮಂಡನೆಯಾಗಿದ್ದು, 1947ರ ನವೆಂಬರ್‌ 26ರಂದು. ಆಗ ಹಣಕಾಸು ಸಚಿವರಾಗಿದ್ದ ಆರ್‌.ಕೆ. ಷಣ್ಮುಖಂ ಚೆಟ್ಟಿ ಅವರು ಚರ್ಮದ ಬ್ಯಾಗ್‌ನಲ್ಲಿ ಬಜೆಟ್‌ ಪುಸ್ತಕವನ್ನು ತಂದಿದ್ದರು.‌1958ರಲ್ಲಿ ಬಜೆಟ್‌ ಮಂಡನೆ ಮಾಡಿದ್ದ ಜವಹರ್‌ಲಾಲ್‌ ನೆಹರು ಕಪ್ಪು ಸೂಟ್‌ಕೇಸ್‌ನಲ್ಲಿ ಬಜೆಟ್‌ ಪುಸ್ತಕವನ್ನು ತಂದಿದ್ದರು. ಮತ್ತೆ ಮನಮೋಹನ್‌ ಸಿಂಗ್‌ ಅವರು ವಿತ್ತ ಸಚಿವರಾದಾಗ ಸೂಟ್‌ಕೇಸ್‌ ಬದಲಿಗೆ ಬಜೆಟ್‌ ಪುಸ್ತಕವಿರುವ ಕಪ್ಪು ಬ್ಯಾಗ್‌ ಹಿಡಿದು ಸಂಸತ್ತಿಗೆ ಬಂದಿದ್ದರು.

ಹಣಕಾಸು ಸಚಿವರಾಗಿ ಬಹಳಷ್ಟು ಸಮಯ ಕೆಲಸ ಮಾಡಿದ ಅರುಣ್‌ ಜೆಟ್ಲಿ ಅವರು ಕಂದು ಬಣ್ಣದ ಸೂಟ್‌ಕೇಸ್‌ ಹಿಡಿದು ಸಂಸತ್ತಿಗೆ ಬರುತ್ತಿದ್ದರು. ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ್ದ ಅರುಣ್‌ ಜೆಟ್ಲಿ ಅವರು ಬಜೆಟ್‌ ಮಂಡನೆಗೆ ಸೂಟ್‌ಕೇಸ್‌ ಹಿಡಿದು ಬರುತ್ತಿದ್ದರಿಂದ ಅದೊಂದು ರೀತಿ ಸಂಸ್ಕೃತಿಯಾಗಿತ್ತು. ಕಳೆದ ಸರ್ಕಾರದ ಕೊನೆಯ ಹಾಗೂ ಮಧ್ಯಂತರ ಬಜೆಟ್‌ ಮಂಡಿಸಿದ್ದ ಪಿಯೂಷ್ ಗೋಯಲ್‌ ಕೆಂಪು ಸೂಟ್‌ಕೇಸ್‌ ತಂದಿದ್ದರು. ಈ ಬಾರಿ ಸೂಟ್‌ಕೇಸ್‌ ಸಂಸ್ಕೃತಿಗೆ ಮಹಿಳಾ ಹಣಕಾಸು ಸಚಿವೆ ಬ್ರೇಕ್‌ ಹಾಕಿದ್ದು, ಮುದ್ರಿತ ಬಜೆಟ್‌ ಪುಸ್ತಕವನ್ನು ಭಾರತದ ರಾಷ್ಟ್ರೀಯ ಲಾಂಛನವಿರುವ ಕೆಂಪು ವಸ್ತ್ರದಲ್ಲಿ ಹಿಡಿದು ತಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT