ಸೋಮವಾರ, ನವೆಂಬರ್ 18, 2019
25 °C

ಉತ್ತರ ಪ್ರದೇಶದಲ್ಲಿ ಅನಿಲ ಸಿಲಿಂಡರ್‌ ಸ್ಫೋಟ; ಕಟ್ಟಡ ಕುಸಿದು 13 ಮಂದಿ ಸಾವು

Published:
Updated:
ಮನೆ ಕುಸಿದಿರುವ ಸ್ಥಳದಲ್ಲಿ ಜನರು ಸೇರಿರುವುದು

ಮವೂ: ಉತ್ತರ ಪ್ರದೇಶದ ಮವೂ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕಟ್ಟಡವೊಂದು ಕುಸಿದು ಬಿದ್ದು 13 ಮಂದಿ ಸಾವಿಗೀಡಾದ ಘಟನೆ ನಡೆದಿದೆ.

 ಮೊಹಮ್ಮದಾಬಾದ್ ಪ್ರದೇಶದಲ್ಲಿನ ಮನೆಯಲ್ಲಿ  ಬೆಳಗ್ಗೆ 7.30ರ ಹೊತ್ತಿಗೆ ಮಹಿಳೆಯೊಬ್ಬರು ಅಡುಗೆ ಮಾಡುತ್ತಿದ್ದಾಗ ಸಿಲಿಂಡರ್ ಸ್ಫೋಟಗೊಂಡಿದೆ. ಈ ಸ್ಫೋಟಕ್ಕೆ ಕಟ್ಟಡ ಕುಸಿದಿದೆ. ಬೆಳಗ್ಗೆ ಭಾರೀ ಸದ್ದು ಕೇಳಿಸಿತ್ತು ಎಂದು ನೆರೆಹೊರೆಯವರು ಹೇಳಿದ್ದಾರೆ.

ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವಾರು ಮಂದಿ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯ ಮಾಡುತ್ತಿದ್ದಾರೆ.

ಸಿಲಿಂಡರ್ ‌ಸೋರಿಕೆಯಾದ ಕಾರಣ ಸ್ಫೋಟ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಘಟನೆಗೆ  ಮುಖ್ಯಮಂತ್ರಿ ಯೋಗಿ  ಆದಿತ್ಯನಾಥ  ಸಂತಾಪ ವ್ಯಕ್ತ ಪಡಿಸಿದ್ದು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಆದೇಶಿಸಿದ್ದಾರೆ.
 

ಪ್ರತಿಕ್ರಿಯಿಸಿ (+)