ಬುಧವಾರ, ಜನವರಿ 29, 2020
26 °C

ಗಾಂಧಿ, ನೆಹರೂ ಭರವಸೆ ಪೂರೈಸಲು ಸಿಎಎ ಜಾರಿ: ಕೇರಳ ರಾಜ್ಯಪಾಲ ಆರಿಫ್‌ಖಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ‘ಮಹಾತ್ಮ ಗಾಂಧಿ ಮತ್ತು ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ದೇಶ ವಿಭಜನೆಯ ಸಂತ್ರಸ್ತರಿಗೆ ನೀಡಿದ್ದ ಭರವಸೆಯನ್ನು ಈಡೇರಿಸುವ ಸಲುವಾಗಿ  ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರೂಪಿಸಲಾಗಿದೆ’ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್‌ ಸಮರ್ಥಿಸಿಕೊಂಡರು.

‘ದೇಶ ವಿಭಜನೆ ಪ್ರಕ್ರಿಯೆಯಲ್ಲಿ ಸಂತ್ರಸ್ತರಾದವರು, ಧರ್ಮದ ಹೆಸರಿನಲ್ಲಿ ಪಾಕಿಸ್ತಾನದಲ್ಲಿ ಕಿರುಕುಳಕ್ಕೆ ಒಳಗಾಗುತ್ತಿರುವ ಅಲ್ಪಸಂಖ್ಯಾತರಿಗಾಗಿ ಈ ಕಾಯ್ದೆಯನ್ನು ರೂಪಿಸಲಾಗಿದೆ’ ಎಂದರು.

‘ಎನ್ಆರ್‌ಸಿ ಯೋಜನೆಯನ್ನು ಪರಿಚಯಿಸಿದ್ದು ಕಾಂಗ್ರೆಸ್ ಪಕ್ಷವೇ. 1985ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರ್ಕಾರ, ಅಸ್ಸಾಂನಲ್ಲಿ ಎನ್‌ಆರ್‌ಸಿಯನ್ನು ಪರಿಚಯಿಸಿತು. 2003ರಲ್ಲಿ ಈ ನಿರ್ಧಾರವನ್ನು ದೇಶದಾದ್ಯಂತ ಅನುಷ್ಠಾನಗೊಳಿಸಲು ಯೋಜನೆ ರೂಪಿಸಿತ್ತು’ ಎಂದು ವಿವರಿಸಿದರು.

‘ದೇಶ ವಿಭಜನೆಯಿಂದ ಸಂತ್ರಸ್ತರಾದವರ ಯೋಗಕ್ಷೇಮ ನೋಡಿಕೊಳ್ಳುವುದು ಭಾರತದ ಹೊಣೆ. ಅವರು ಯಾವಾಗ ಬೇಕಾದರೂ ಭಾರತಕ್ಕೆ ಬರಬಹುದು ಎಂದು ಜವಾಹರ್‌ಲಾಲ್‌ ಹೇಳಿದ್ದರು. ವಿಭಜನೆ ಬಯಸದಿದ್ದರು ಅದರ ಫಲವನ್ನು ಅವರು ಅನುಭವಿಸಬೇಕಾಯಿತು. ಹಾಗಾಗಿ ಅವರಿಗೆ ಭಾರತದ ಬಾಗಿಲು ಸದಾ ತೆರದಿರಬೇಕು ಎನ್ನುವುದು ನೆಹರೂ ಆಶಯವಾಗಿತ್ತು’ ಎಂದರು.

‘ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಹಿಂದೂಗಳು ಮತ್ತು ಸಿಖ್ಖರು ಬಯಸಿದಾಗ ಭಾರತಕ್ಕೆ ಬರುವ ಹಕ್ಕಿದೆ ಮತ್ತು ಅವರು ಗೌರವಯುತವಾಗಿ ಬದುಕಲು ಭಾರತ ಸರ್ಕಾರ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು 1947ರ ಜುಲೈ 7ರಂದು ಮಹಾತ್ಮಗಾಂಧಿ ಹೇಳಿದ್ದರು.

‘ಹಿಂದೆ  ವಲಸೆ ಬಂದ ಎಲ್ಲರಿಗೂ ಭಾರತ ನೆಲೆ ನೀಡಿದೆ. ಆದರೆ, ಈಗ ದೇಶದಲ್ಲಿ ಅಷ್ಟು ಸಂಪತ್ತು ಇಲ್ಲ. ದೇವರ ದಯೆಯಿಂದ ಅದು ಜಾಸ್ತಿಯಾದರೆ, ನಾವು ಎಲ್ಲರಿಗೂ ಅವಕಾಶ ನೀಡುತ್ತೇವೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು