ಗುರುವಾರ , ಆಗಸ್ಟ್ 22, 2019
25 °C

ಇಂದು ಸಂಪುಟ ಸಭೆ ಕಾಶ್ಮೀರ ಬಗ್ಗೆ ನಿರ್ಧಾರ?

Published:
Updated:
Prajavani

ನವದೆಹಲಿ: ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂಬ ವದಂತಿ ದಟ್ಟವಾಗಿರುವಾಗಲೇ ಸೋಮವಾರ ಬೆಳಿಗ್ಗೆ ಸಚಿವ ಸಂಪುಟದ ಸಭೆ ನಿಗದಿಯಾಗಿದೆ. 

ಗೃಹ ಸಚಿವ ಅಮಿತ್‌ ಶಾ ಅವರು ಹಿರಿಯ ಅಧಿಕಾರಿಗಳ ಜತೆಗೆ ಭಾನುವಾರ ಸಭೆ ನಡೆಸಿ ಕಾಶ್ಮೀರದ ಪರಿಸ್ಥಿತಿ ಕುರಿತು ಚರ್ಚೆ ನಡೆಸಿ
ದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌, ಗುಪ್ತಚರ ಘಟಕದ (ಐ.ಬಿ) ಮುಖ್ಯಸ್ಥ ಅರವಿಂದ ಕುಮಾರ್‌, ಗೃಹ ಕಾರ್ಯದರ್ಶಿ ರಾಜೀವ್‌ ಗೌಬಾ ಸಭೆಯಲ್ಲಿದ್ದರು. ಈ ಸಭೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗ ಮಾಡಿಲ್ಲ. 

ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರ ದಾಳಿ ಭೀತಿ: ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ

ಸಂಸತ್‌ ಅಧಿವೇಶನದಲ್ಲಿ ಕಾಶ್ಮೀರ ವಿಚಾರ ಚರ್ಚೆಯಾಗುವ ಸಾಧ್ಯತೆ ಇದೆ. ಕಲಾಪ ಆರಂಭವಾಗುವುದಕ್ಕೆ ಮೊದಲೇ ಸಂಪುಟ ಸಭೆ ನಡೆಯಲಿದೆ. 

ಇದನ್ನೂ ಓದಿ: ಕಾಶ್ಮೀರ: ಮೆಹಬೂಬಾ, ಒಮರ್‌ಗೆ ಗೃಹಬಂಧನ

ಅಮರನಾಥ ಯಾತ್ರೆಯನ್ನು ರದ್ದು ಮಾಡಿ, ಪ್ರವಾಸಿಗರೆಲ್ಲರೂ ಕಾಶ್ಮೀರ ಬಿಟ್ಟು ಹೋಗಬೇಕು ಎಂದು ಸರ್ಕಾರ ಕಳೆದ ವಾರ ಆದೇಶ ಕೊಟ್ಟಿದೆ. ಜತೆಗೆ ರಾಜ್ಯದಲ್ಲಿ ಭಾರಿ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸಲಾಗಿದೆ.

ಕಾಶ್ಮೀರ ನೀತಿಯಲ್ಲಿ ಬದಲಾವಣೆ ಇಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ ಮಲಿಕ್‌ ಸ್ಪಷ್ಟನೆ ನೀಡಿದ್ದಾರೆ. ಆದರೆ, ಕಾಶ್ಮೀರದಲ್ಲಿ ವಿವಿಧ ರೀತಿಯ ವದಂತಿ ಹರಿದಾಡುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅಥವಾ ಶಾ ಅವರು ಮೌನ ಮುರಿದಿಲ್ಲ.

Post Comments (+)