ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಚ್‌ಎಫ್‌ಎಲ್‌ನಿಂದ ಕಿಕ್‌ಬ್ಯಾಕ್‌ ಪಡೆದಿದ್ದ ರಾಣಾ ಕಪೂರ್: ಸಿಬಿಐ ಶಂಕೆ

Last Updated 9 ಮಾರ್ಚ್ 2020, 13:56 IST
ಅಕ್ಷರ ಗಾತ್ರ

ನವದೆಹಲಿ: ಯೆಸ್‌ ಬ್ಯಾಂಕ್‌ ಸ್ಥಾಪಕ ರಾಣಾ ಕಪೂರ್‌ ಅವರು, ದಿವಾನ್‌ ಹೌಸಿಂಗ್‌ ಫೈನಾನ್ಸ್ ಲಿಮಿಟೆಡ್‌ನಲ್ಲಿ (ಡಿಎಚ್‌ಎಫ್‌ಎಲ್‌) ₹3,700 ಕೋಟಿ ಹೂಡಿಕೆ ಮಾಡಲು, ₹600 ಕೋಟಿ ಕಿಕ್‌ಬ್ಯಾಕ್‌ ಪಡೆದಿರುವ ಸಾಧ್ಯತೆ ಇದೆ ಎಂದು ಸಿಬಿಐ ಶಂಕೆ ವ್ಯಕ್ತಪಡಿಸಿದೆ.

ರಾಣಾಕಪೂರ್, ಪತ್ನಿ ಬಿಂದು, ಮೂವರು ಪುತ್ರಿಯರು ಹಾಗೂ ಡಿಎಚ್‌ಎಫ್‌ಎಲ್‌ ನಿರ್ದೇಶಕ ಕಪಿಲ್‌ ವಾಧವನ್‌ ಮತ್ತು ಸಹೋದರ ಧೀರಜ್‌ ಸೇರಿದಂತೆ 12 ಮಂದಿ ಹಾಗೂ ಕಂಪನಿಗಳ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ.

ಕಪೂರ್‌ ಅವರು, ಪತ್ನಿ ಮತ್ತು ಮಕ್ಕಳ ಬಳಿ ಇರುವ ಕಂಪನಿಗಳ ಮೂಲಕ ಯೆಸ್‌ ಬ್ಯಾಂಕ್‌ನಿಂದ ಡಿಎಚ್ಎಲ್‌ನ ಅಲ್ಪಾವಧಿ ಡಿಬೆಂಚರ್‌ಗಳಲ್ಲಿ ಹೂಡಿಕೆ ಮಾಡುವಲ್ಲಿ ಲಾಭ ಪಡೆದಿದ್ದಾರೆ. ಇಂತಹ ವಹಿವಾಟುಗಳಿಗಾಗಿ ಅವರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

62 ವರ್ಷದ ಕಪೂರ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ. ಇವರ ವಿರುದ್ಧ ಹಣ ಅಕ್ರಮ ವಗಾವಣೆ ನಿಯಂತ್ರಣ ಕಾಯ್ದೆ (ಪಿಎಂಎಲ್‌ಎ) ಅಡಿ ಪ್ರಕರಣ ದಾಖಲಾಗಿದೆ. ಇವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಅಧಿಕಾರಿಗಳು ಮೊದಲು ಹೇಳಿದ್ದರು.

ಸುಮಾರು ₹2,000 ಕೋಟಿ ರೂಪಾಯಿ ಹೂಡಿಕೆ, ಕಾಗದಲ್ಲಿಯಷ್ಟೇ ಅಸ್ತಿತ್ವದಲ್ಲಿರುವ 12 ಕಂಪನಿಗಳು, ದುಬಾರಿ ಬೆಲೆಯ 44 ಪೇಂಟಿಂಗ್‌ಗಳ ವಿವರತನಿಖೆಗೆ ಆರಂಭಿಸಿರುವ ಇ.ಡಿ ಅಧಿಕಾರಿಗಳಿಗೆ ತಿಳಿದು ಬಂದಿತ್ತು.

ಕಪೂರ್ ಕುಟುಂಬ ಸದಸ್ಯರು ಲಂಡನ್‌ನಲ್ಲಿ ಹೊಂದಿರುವ ಕೆಲ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಇವುಗಳ ಸ್ವಾಧೀನಕ್ಕೆ ಹಣದ ಮೂಲ ಕುರಿತಂತೆ ಈಗ ತನಿಖೆ ನಡೆಸಲಾಗುತ್ತಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT