ಶನಿವಾರ, ಸೆಪ್ಟೆಂಬರ್ 21, 2019
21 °C

ಸಿಬಿಎಸ್ಇ 12ನೇ ತರಗತಿಯ ಫಲಿತಾಂಶ ಪ್ರಕಟ

Published:
Updated:

ನವದೆಹಲಿ: ಸಿಬಿಎಸ್‌ಇಯ 12ನೇ ತರಗತಿ ಫಲಿತಾಂಶವು  ಗುರುವಾರ ಮಧ್ಯಾಹ್ನ ಪ್ರಕಟವಾಗಿದೆ. 

ಸಿಬಿಎಸ್‌ಇಯ cbse.nic.in ಮತ್ತು cbseresults.nic.inನಲ್ಲಿ ವಿದ್ಯಾರ್ಥಿಗಳಿಗೆ ಫಲಿತಾಂಶ ಲಭ್ಯ. 

2018–19ರ 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ಇದೇ ವರ್ಷದ ಫೆಬ್ರುವರಿ–ಮಾರ್ಚ್‌ ತಿಂಗಳಲ್ಲಿ ನಡೆಸಲಾಗಿತ್ತು. ಒಟ್ಟು 31,14,821 ವಿದ್ಯಾಥಿರ್ಗಳು 10 ಮತ್ತು 12ನೇ ತರಗತಿಯ ಪರೀಕ್ಷೆ ಬರೆದಿದ್ದರು. ದೇಶದ 4,974 ಕೇಂದ್ರಗಳಲ್ಲಿ ಮತ್ತು 78 ವಿದೇಶಿ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 

ಸದ್ಯ 12ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ವಿದ್ಯಾರ್ಥಿಗಳು cbse.examresults.net, cbseresults.nic.in ಮತ್ತು  results.gov.in ಇವುಗಳಲ್ಲಿ ಫಲಿತಾಂಶ ನೋಡಬಹುದು. 

Post Comments (+)