ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಯಾಳಂ ಸುದ್ದಿವಾಹಿನಿಗಳ ನಿರ್ಬಂಧ ಆದೇಶ ಹಿಂಪಡೆದ ಕೇಂದ್ರ ಸರ್ಕಾರ

Last Updated 7 ಮಾರ್ಚ್ 2020, 8:10 IST
ಅಕ್ಷರ ಗಾತ್ರ

ನವದೆಹಲಿ: ಎರಡು ಮಲಯಾಳಂ ಸುದ್ದಿವಾಹಿನಿಗಳನ್ನು 48 ಗಂಟೆಗಳ ಕಾಲ ನಿಷೇಧಿಸಿಹೊರಡಿಸಿದ್ದ ಆದೇಶವನ್ನು ಕೇಂದ್ರ ಸರ್ಕಾರಹಿಂಪಡೆದಿದೆ.

ಮೀಡಿಯಾ ಒನ್ ಮತ್ತು ಏಷ್ಯಾನೆಟ್‌ ವಾಹಿನಿಗಳು ಮಾಡಿದ್ದ ದೆಹಲಿ ಹಿಂಸಾಚಾರ ಕುರಿತ ವರದಿಯಲ್ಲಿ ಕೋಮು ಸಾಮರಸ್ಯ ಕೆಡಿಸುವ ಅಂಶಗಳಿದ್ದವುಎಂದು ಆರೋಪಿಸಿ ಸುದ್ಧಿವಾಹಿನಿಗಳ ಮೇಲೆ ಕೇಂದ್ರ ನಿಷೇಧ ಹೇರಿತ್ತು.

‘ಏಷ್ಯಾನೆಟ್‌’ ಮೇಲೆ ವಿಧಿಸಿದ್ದ ನಿಷೇಧವನ್ನುಶನಿವಾರ ಮಧ್ಯರಾತ್ರಿ 1.30ಕ್ಕೆ ತೆರವುಗೊಳಿಸಲಾಯಿತು. ‘ಮೀಡಿಯಾ ಒನ್’ ಮೇಲೆ ವಿಧಿಸಿದ್ದನಿರ್ಬಂಧವನ್ನು ಶನಿವಾರ ಬೆಳಿಗ್ಗೆ 9.30ಕ್ಕೆ ತೆರವುಗೊಳಿಸಿರುವುದಾಗಿ ಮಾಹಿತಿ ಮತ್ತು ಪ್ರಸಾರ ಇಲಾಖೆ ತಿಳಿಸಿದೆ.

ನಿಷೇಧವನ್ನು ಹಿಂಪಡೆಯುವಂತೆ ಸುದ್ದಿ ವಾಹಿನಿಗಳು ಸಚಿವಾಲಯಕ್ಕೆ ಮನವಿ ಮಾಡಿದ್ದವು ಎಂದು ಮೂಲಗಳು ಹೇಳಿವೆ.

ಫೆಬ್ರವರಿ 25‌ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ವರದಿಯಲ್ಲಿ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಯನ್ನು ಬಿತ್ತರಿಸುವ ಮೂಲಕ ಈ ಮಾಧ್ಯಮಗಳು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದವು ಎಂದು ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿತ್ತು.

1994ರ ಕೇಬಲ್ ನೆಟ್‌ವರ್ಕ್‌ ಕಾಯ್ದೆ ಉಲ್ಲೇಖಿಸಿ ಸುದ್ಧಿ ವಾಹಿನಿಗಳ ಪ್ರಸಾರವನ್ನು ನಿಷೇಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT