ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19: ಮನೆಮನೆ ತಪಾಸಣೆಗೆ ಮುಂದಾದ ಚೆನ್ನೈ ಮಹಾನಗರ ಪಾಲಿಕೆ

ಕಟ್ಟುನಿಟ್ಟಿನ ಲಾಕ್‌ಡೌನ್, 12 ಸಾವಿರ ಕ್ಷೇತ್ರ ಕಾರ್ಯಕರ್ತರಿಂದ ತಪಾಸಣೆ
Last Updated 20 ಜೂನ್ 2020, 15:12 IST
ಅಕ್ಷರ ಗಾತ್ರ

ಚೆನ್ನೈ: ಚೆನ್ನೈನಲ್ಲಿ ಕೋವಿಡ್‌-19 ನಿಯಂತ್ರಣಕ್ಕಾಗಿ ಮಾಡಿರುವ ಕಠಿಣ ಲಾಕ್‌ಡೌನ್ ಶನಿವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಗ್ರೇಟರ್ ಚೆನ್ನೈ ಮಹಾಗನರ ಪಾಲಿಕೆ (ಜಿಸಿಸಿ) ನಗರದ ಎಲ್ಲಾ ನಿವಾಸಿಗಳ ಆರೋಗ್ಯ ತಪಾಸಣೆಗೆ ಮುಂದಾಗಿದೆ.

ಜ್ವರ, ಕೆಮ್ಮು ಮೊದಲಾದ ಕೋವಿಡ್‌–19 ಲಕ್ಷಣಗಳಿರುವವರನ್ನು ಗುರುತಿಸಲು ಸುಮಾರು 12 ಸಾವಿರ ಕ್ಷೇತ್ರ ಕಾರ್ಯಕರ್ತರು ಸಜ್ಜಾಗಿದ್ದಾರೆ. ಎರಡು ವಾರಗಳ ಕಾಲ ಈ ಕಾರ್ಯಕರ್ತರು ಚೆನ್ನೈ ನಗರದಲ್ಲಿ ಕೋವಿಡ್–19 ಸೋಂಕಿತರನ್ನು ಗುರುತಿಸುವ ಕಾರ್ಯ ಕೈಗೊಳ್ಳಲಿದ್ದಾರೆ. ಇದಕ್ಕಾಗಿ ಇನ್ಫ್ರಾರೆಡ್ ಥರ್ಮಲ್ ಸ್ಕ್ಯಾನರ್‌ಗಳು, ಪಲ್ಸ್ ಆಕ್ಸಿಮೀಟರ್‌ಗಳು ಸೇರಿದಂತೆ ಇತರ ವೈದ್ಯಕೀಯ ಉಪಕರಣಗಳನ್ನು ಬಳಸಲು ಜಿಸಿಸಿ ಮುಂದಾಗಿದೆ.

ಚೆನ್ನೈನಲ್ಲಿ ಜೂನ್ 19ರಿಂದ ಆರಂಭವಾಗಿರುವ ಲಾಕ್‌ಡೌನ್ ಜೂನ್ 30ಕ್ಕೆ ಮುಕ್ತಾಯವಾಗಲಿದೆ. ಈಗಾಗಲೇ ಕ್ಷೇತ್ರ ಕಾರ್ಯಕರ್ತರಿಗೆ 10 ಸಾವಿರ ಇನ್ಫ್ರಾರೆಡ್ ಥರ್ಮಲ್ ಸ್ಕ್ಯಾನರ್‌ಗಳನ್ನು ನೀಡಲಾಗಿದೆ.

‘ಕ್ಷೇತ್ರ ಕಾರ್ಯಕರ್ತರು ನಗರದ ಪ್ರತಿ ಮನೆಗೂ ಭೇಟಿ ನೀಡಲಿದ್ದಾರೆ. ಜನರ ಆರೋಗ್ಯ ಸಮಾಚಾರದ ಜತೆಗೆ ಕೋವಿಡ್‌–19 ಲಕ್ಷಣಗಳ ಬಗ್ಗೆ ವಿಚಾರಿಸಲಿದ್ದಾರೆ. ಥರ್ಮಲ್ ಸ್ಕ್ಯಾನರ್ ಮೂಲಕ ಜನರದೇಹದ ಉಷ್ಣಾಂಶ ಪರೀಕ್ಷಿಸುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ಜಿಸಿಸಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮನೆಮನೆಯ ಆರೋಗ್ಯ ತಪಾಸಣೆಯಲ್ಲದೇ ಚೆನ್ನೈ ಮಹಾನಗರ ಪಾಲಿಕೆ, ನಗರದಾದ್ಯಂತ 600 ಶಿಬಿರಗಳನ್ನೂ ಆಯೋಜಿಸಲಿದೆ. ಇಲ್ಲಿ ನಿತ್ಯ 30ರಿಂದ 40 ಸಾವಿರ ಜನರ ತಪಾಸಣೆ ನಡೆಯಲಿದೆ. ಈ ಶಿಬಿರಗಳಿಗೆ ಜನರು ಸ್ವಯಂ ಪ್ರೇರಿತರಾಗಿ ಬರಬಹುದು. ಈ ಕ್ರಮವು ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸಹಾಯವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT