ಸಿಬಿಐಗೆ ನೀಡಿದ್ದ ’ಮುಕ್ತ ಸಮ್ಮತಿ’ ವಾಪಸ್‌ ಪಡೆದ ಛತ್ತೀಸ್‌ಗಡ ಸರ್ಕಾರ

7

ಸಿಬಿಐಗೆ ನೀಡಿದ್ದ ’ಮುಕ್ತ ಸಮ್ಮತಿ’ ವಾಪಸ್‌ ಪಡೆದ ಛತ್ತೀಸ್‌ಗಡ ಸರ್ಕಾರ

Published:
Updated:

ರಾಯಪುರ: ಛತ್ತೀಸ್‌ಗಡದಲ್ಲಿ ತನಿಖೆ ನಡೆಸುವುದಕ್ಕೆ ಸಿಬಿಐಗೆ ನೀಡಲಾಗಿದ್ದ 'ಮುಕ್ತ ಸಮ್ಮತಿ'ಯನ್ನು ವಾಪಸ್‌ ಪಡೆಯಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.  

ಈ ಬಗ್ಗೆ ಛತ್ತೀಸ್‌ಗಡದ ಕಾಂಗ್ರೆಸ್‌ ಸರ್ಕಾರ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದೆ. ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಬಳಿಕ ಛತ್ತೀಸ್‌ಗಡ ಸಹ  ಸಿಬಿಐಗೆ ಕೆಂಪು ಬಾವುಟ ತೋರಿಸಿದೆ. 

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವಿದೆ, ಸಿಬಿಐ ಪ್ರಮುಖ ಅಧಿಕಾರಿಗಳ ವಿರುದ್ಧವೇ ಭ್ರಷ್ಟಾಚಾರದ ಆರೋಪ ಬಂದಿದ್ದು, ವಿಶ್ವಾಸಾರ್ಹತೆಗೆ ದಕ್ಕೆಯಾಗಿದೆ ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ರಾಜ್ಯ ಪ್ರವೇಶ ಮಾಡುವುದು ಸೂಕ್ತವಲ್ಲ, ಎರಡನೇಯದಾಗಿ ರಾಜ್ಯ ಸರ್ಕಾರದ್ದೆ ಒಂದು ತನಿಖಾ ಸಂಸ್ಥೆ ಕೆಲಸ ಮಾಡುತ್ತಿದೆ, ಸಿಬಿಐ ಅಧಿಕಾರಿಗಳು ಇಲ್ಲಿಗೆ ಬಂದು ನಮ್ಮ ಅಧಿಕಾರಿಗಳ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಇದರಿಂದ ಸರ್ಕಾರದ ನಿಯಮಿತ ಕೆಲಸ ಕಾರ್ಯಗಳಿಗೂ ತೊಂದರೆಯಾಗುತ್ತದೆ ಎಂದು ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ ತಿಳಿಸಿದ್ದಾರೆ. 

1946ರ ದೆಹಲಿ ವಿಶೇಷ ಪೊಲೀಸ್‌ ಸಂಸ್ಥೆ ಕಾಯ್ದೆ ಅಡಿಯಲ್ಲಿ ಸಿಬಿಐ ಕಾರ್ಯನಿರ್ವಹಿಸುತ್ತದೆ. ಈ ಕಾಯ್ದೆ ಪ್ರಕಾರ ದೆಹಲಿಯ ಹೊರಗೆ ತನಿಖೆ ನಡೆಸಲು ಆಯಾ ರಾಜ್ಯಗಳ ಅನುಮತಿ ಪಡೆದುಕೊಳ್ಳಬೇಕು. ಅದಕ್ಕಾಗಿ ರಾಜ್ಯಗಳು ಸಿಬಿಐಗೆ 'ಮುಕ್ತ ಸಮ್ಮತಿ' ನೀಡುತ್ತವೆ.

ಬರಹ ಇಷ್ಟವಾಯಿತೆ?

 • 7

  Happy
 • 3

  Amused
 • 1

  Sad
 • 0

  Frustrated
 • 8

  Angry

Comments:

0 comments

Write the first review for this !