ಗುರುವಾರ , ಜೂನ್ 24, 2021
23 °C
ಮೌನ ಮುರಿದ ರಾಜಸ್ಥಾನ ಮುಖ್ಯಮಂತ್ರಿ

ಲೋಕಸಭೆ ಚುನಾವಣೆ ಸೋಲಿನ ಹೊಣೆ ಸಚಿನ್‌ ಪೈಲಟ್ ಹೊರಲಿ: ಅಶೋಕ್‌ ಗೆಹ್ಲೋಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ: ಲೋಕಸಭೆ ಚುನಾವಣೆ ಫಲಿತಾಂಶದ ಎರಡು ವಾರಗಳ ನಂತರ ಮೌನ ಮುರಿದಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್, ‘ಜೋಧ್‌ಪುರದಲ್ಲಿ ಕಾಂಗ್ರೆಸ್ ಸೋಲಿನ ಹೊಣೆಯನ್ನು ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಹೊರಬೇಕು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಹೆಚ್ಚಿನ ವಾಕ್ಸಮರ​

ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 25 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋತಿತ್ತು. ಜೋಧ್‌ಪುರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಅವರ ಪುತ್ರ ವೈಭವ್ ಗೆಹ್ಲೋಟ್‌ ಅವರೇ ಪರಾಭವಗೊಂಡಿದ್ದರು.

‘ಜೋಧ್‌ಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ದೊಡ್ಡ ಅಂತರದಿಂದ ಗೆಲ್ಲಲಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಆರು ಮಂದಿ ಶಾಸಕರಿದ್ದಾರೆ ಎಂದು ಸಚಿನ್‌ ಪೈಲಟ್‌ ಹೇಳಿದ್ದರು. ಪಕ್ಷ ಸಾಕಷ್ಟು ಪ್ರಚಾರವನ್ನು ಮಾಡಿತ್ತು. ಹೀಗಾಗಿ, ಸಚಿನ್‌ ಸೋಲಿನ ಹೊಣೆ ಹೊರಬೇಕು’ ಎಂದು ಎಬಿಪಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಗೆಹ್ಲೋಟ್‌ ಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ: ಗೆಹ್ಲೋಟ್‌ ಸ್ಥಾನಕ್ಕೆ ಕುತ್ತು?​

‘ಗೆದ್ದಿದ್ದರೆ ಸಚಿನ್‌ ಪೈಲಟ್‌ ಅದರ ಹಿರಿಮೆ ಪಡೆಯುತ್ತಿದ್ದರು. ಈಗ ಸೋಲಿನ ಹೊಣೆಯನ್ನು ಹೊರಲಿ’ ಎಂದು ಅವರು ಹೇಳಿದರು. ವೈಭವ್‌ ಈ ಕ್ಷೇತ್ರದಲ್ಲಿ 2.7 ಲಕ್ಷ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯ  ವಿರುದ್ಧ ಸೋತಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು