ಶುಕ್ರವಾರ, ಆಗಸ್ಟ್ 23, 2019
22 °C

₹1 ಶುಲ್ಕ ಪಡೆಯಲು ನಾಳೆ ಬನ್ನಿ ಎಂದಿದ್ದರು ಸುಷ್ಮಾ: ಹರೀಶ್ ಸಾಳ್ವೆ

Published:
Updated:

ನವದೆಹಲಿ: ಕುಲಭೂಷಣ್‌ ಜಾಧವ್‌ ಅವರ ಮರಣದಂಡನೆ ಪ್ರಕರಣಕ್ಕೆ ಸಂಬಂಧಿಸಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಜಾಧವ್‌ ಪರ ವಾದ ಮಂಡಿಸಿದ್ದ ಹರೀಶ್ ಸಾಳ್ವೆ ಅವರಲ್ಲಿ ವಾದ ಮಂಡನೆಗಾಗಿರುವ ಶುಲ್ಕ ₹1 ಪಡೆಯಲು ನಾಳೆ ಬನ್ನಿ ಎಂದಿದ್ದರು ಸುಷ್ಮಾ ಸ್ವರಾಜ್.

ಸುಷ್ಮಾ ಸ್ವರಾಜ್ ನನ್ನಲ್ಲಿ ನಾಳೆ ಬನ್ನಿ ಎಂದು ಹೇಳಿದ ಒಂದು ಗಂಟೆಯಲ್ಲಿ ಅವರು ನಿಧನರಾದರು ಎಂದು ಟೈಮ್ಸ್ ನೌ ಜತೆ ಮಾತನಾಡಿದ ಸಾಳ್ವೆ ಹೇಳಿದ್ದಾರೆ.

ನಾನು ಮಂಗಳವಾರ ರಾತ್ರಿ 8.50ಕ್ಕೆ ಅವರೊಂದಿಗೆ ಮಾತನಾಡಿದ್ದೆ. ಅದೊಂದು ಭಾವುಕ ಸಂವಾದ ಆಗಿತ್ತು. ನನ್ನನ್ನು ಭೇಟಿಯಾಗಬೇಕಿತ್ತೆಂದು ಅವರು ಹೇಳಿದರು. ನೀವು ವಾದಿಸಿ ಗೆಲುವು ಸಾಧಿಸಿದ ಪ್ರಕರಣದ ಶುಲ್ಕವನ್ನು ನಾನು ನಿಮಗೆ ನೀಡಬೇಕಿದೆ. ಖಂಡಿತವಾಗಿಯೂ ನಾನು ಆ ಅಮೂಲ್ಯ ಶುಲ್ಕವನ್ನು ಪಡೆಯಲು ಬಂದೇ ಬರುತ್ತೇನೆ ಎಂದು ನಾನು ಹೇಳಿದೆ. ಹಾಗಾದರೆ ನಾಳೆ 6 ಗಂಟೆಗೆ ಬನ್ನಿ ಎಂದಿದ್ದರು ಸುಷ್ಮಾ ಅಂತಾರೆ ಸಾಳ್ವೆ.

ಇದನ್ನೂ ಓದಿ

ಜಾಧವ್‌ ಪರ ವಾದ ಮಂಡಿಸಲು ಹರೀಶ್‌ ಸಾಳ್ವೆ ಅವರು ಪಡೆದ ಶುಲ್ಕ ₹1 !

ಐಸಿಜೆ ತೀರ್ಪು: ಜಾಧವ್‌ಗೆ ಜೀವದಾನ

Post Comments (+)