ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಗೊಂದಲಮಯ ‍ಪಕ್ಷ: ಸಿಡಿಎಸ್‌ ಪ್ರಶ್ನಿಸಿದ್ದಕ್ಕೆ ಜಾವಡೇಕರ್ ತಿರುಗೇಟು

Last Updated 1 ಜನವರಿ 2020, 10:59 IST
ಅಕ್ಷರ ಗಾತ್ರ

ನವದೆಹಲಿ:ಕಾಂಗ್ರೆಸ್‌ ಗೊಂದಲದಿಂದ ಕೂಡಿದ ಪಕ್ಷ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಟೀಕಿಸಿದ್ದಾರೆ. ಜನರಲ್ ಬಿಪಿನ್ ರಾವತ್ ಅವರನ್ನು‘ರಕ್ಷಣಾ ಪಡೆಗಳ ಮುಖ್ಯಸ್ಥ’ರಾಗಿ (ಸಿಡಿಎಸ್‌) ನೇಮಕ ಮಾಡಿದ್ದನ್ನು ಕಾಂಗ್ರೆಸ್ ಪ್ರಶ್ನಿಸಿದ್ದಕ್ಕೆ ಅವರು ತಿರುಗೇಟು ನೀಡಿದ್ದಾರೆ. ಸಿಡಿಎಸ್ ನೇಮಕ ವಿಚಾರವನ್ನು ರಾಜಕೀಯಗೊಳಿಸುವ ಯತ್ನ ಖಂಡನೀಯ ಎಂದೂ ಅವರು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿಡಿಎಸ್ ಹೊಸ ವ್ಯವಸ್ಥೆಯನ್ನು ಸೃಷ್ಟಿಸಿದೆ. ಈ ವಿಚಾರದಲ್ಲಿ ದೇಶ ಹೆಮ್ಮೆಪಡಬೇಕು’ ಎಂದು ಹೇಳಿದ್ದಾರೆ.

‘ರಾಹುಲ್‌ ಗಾಂಧಿ ಅವರ ಸಲಹೆಗಾರರುಟ್ವೀಟ್‌ಗಳನ್ನು ಮಾಡುತ್ತಾರೆ. ಆದರೆ ಕಾಂಗ್ರೆಸ್‌ ಪಕ್ಷದವರು ಆ ವಿಷಯಕ್ಕಿಂತ ಭಿನ್ನವಾಗಿ ಮಾತನಾಡುತ್ತಾರೆ. ಇದರಿಂದಾಗಿಯೇ ಕಾಂಗ್ರೆಸ್ ಗೊಂದಲದಿಂದ ಕೂಡಿದ ಪಕ್ಷವಾಗಿದೆ’ ಎಂದು ಅವರು ಹೇಳಿದ್ದಾರೆ.

ಸಿಡಿಎಸ್ ಸ್ಥಾಪನೆಗೆ ಸಚಿವಸಂಪುಟದ ಭದ್ರತಾ ಸಮಿತಿ ಕಳೆದ ವಾರ ಅನುಮೋದನೆ ನೀಡಿತ್ತು. ಅದರಂತೆ ಸಿಡಿಎಸ್ ಸ್ಥಾಪನೆಯಾಗಿದ್ದು, ಜನರಲ್ ಬಿಪಿನ್ ರಾವತ್ ಅವರು ಮೊದಲ ಮುಖ್ಯಸ್ಥರಾಗಿ ಬುಧವಾರ ಅಧಿಕಾರ ಸ್ವೀಕರಿಸಿದ್ದರು.

ರಾವತ್ ನೇಮಕದ ಬಗ್ಗೆ ಮಂಗಳವಾರ ಹಲವು ಪ್ರಶ್ನೆಗಳನ್ನು ಕೇಳಿದ್ದ ಕಾಂಗ್ರೆಸ್, ಕೇಂದ್ರ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ ಎಂದು ಆರೋಪಿಸಿತ್ತು.‘ಸಿಡಿಎಸ್ ನೇಮಕ ವಿಚಾರದಲ್ಲಿ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ. ದಯರದೃಷ್ಟವಶಾತ್, ಸಮಯವೇ ಅದಕ್ಕೆ ಉತ್ತರ ನೀಡಲಿದೆ’ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಟ್ವೀಟ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT