ಅಹಮದಾಬಾದ್: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಅಹಮದಾಬಾದ್ ಕಾರ್ಪೋರೇಟರ್ ಬದ್ರುದ್ದೀನ್ ಶೇಖ್ ಅವರು ಕೊವೀಡ್–19 ನಿಂದಾಗಿ ಭಾನುವಾರ ಮೃತಪಟ್ಟಿದ್ದಾರೆ. ಅವರನ್ನು ಎಂಟು ದಿನಗಳಿಂದ ನಗರದ ಎಸ್ವಿಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೋವಿಡ್-19 ಸೋಂಕು ದೃಢಪಟ್ಟ ನಂತರ ಶೇಖ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಕಳೆದ ಎಂಟು ದಿನಗಳಿಂದ ಸೋಂಕಿನೊಂದಿಗೆ ಹೋರಾಟ ನಡೆಸಿದರಾದರೂ, ಬದುಕುಳಿಯಲು ಅವರಿಗೆ ಸಾಧ್ಯವಾಗಲಿಲ್ಲ.

ಈ ಸಂಬಂಧ ಮತ್ತೊಬ್ಬ ನಾಯಕ ಶಕ್ತಿಸಿನ್ಹ ಗೋಹಿಲ್ ಅವರು ಟ್ವಿಟರ್ನಲ್ಲಿ ವಿಡಿಯೊ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ‘ನನ್ನ ಸ್ನೇಹಿತ ಬದ್ರುದ್ದೀನ್, ನಿಜವಾದ ಕೊರೊನಾ ವಾರಿಯರ್. ಗುಜರಾತಿನ ಅಹಮದಾಬಾದ್ನಲ್ಲಿ ಬಡ ಜನರಿಗೆ ನೆರವು ನೀಡಲು ಹೋಗಿದ್ದಾಗ ಆತನಿಗೆ ಸೋಂಕು ತಗುಲಿತ್ತು. ಬದ್ರುದ್ದೀನ್ ಸಾವು,ಗುಜರಾತ್ ಕಾಂಗ್ರೆಸ್ ಕುಟುಂಬದ ಪಾಲಿಗೆ ಇದು ತುಂಬಲಾರದ ನಷ್ಟ. ಇದು ಎಲ್ಲರಿಗೂ ಪಾಠವಾಗಲಿ. ದಯವಿಟ್ಟು ಎಲ್ಲರೂ ಎಚ್ಚರದಿಂದಿರಿ. ಸ್ಥಳೀಯ ಆಡಳಿತದೊಂದಿಗೆ ಸಹಕರಿಸಿ’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.