ಬುಧವಾರ, ಮೇ 27, 2020
27 °C

ಕೊರೊನಾ ಸೋಂಕು ದೃಢಪಟ್ಟ ಮರುದಿನವೇ ಮಗುವಿಗೆ ಜನ್ಮ ನೀಡಿದ ಏಮ್ಸ್‌ ವೈದ್ಯರ ಪತ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ವೈರಸ್‌ ಸೋಂಕು ದೃಢಪಟ್ಟ ಮರುದಿನವೇ ಮಹಿಳೆಯೊಬ್ಬರು ತಮ್ಮ ಮಗುವಿಗೆ ಜನ್ಮ ನೀಡಿದ ಘಟನೆ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಡೆದಿದೆ. 

ಮಹಿಳೆಯು ಏಮ್ಸ್‌ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ವೈದ್ಯರೊಬ್ಬರ ಪತ್ನಿಯಾಗಿದ್ದಾರೆ. 

ವೈದ್ಯರು ಹಾಗೂ ಅವರ ಗರ್ಭಿಣಿ ಪತ್ನಿಯಲ್ಲಿ ಕೊರೊನಾ ಸೋಂಕು ಇರುವುದು ಗುರುವಾರ ಪತ್ತೆಯಾಗಿತ್ತು. ಅವರಿಬ್ಬರನ್ನು ಪತ್ಯೇಕ ವಾರ್ಡ್‌ಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. 

ಮಗುವಿಗೆ ಜನ್ಮ ನೀಡಿದ 29 ವರ್ಷದ ಮಹಿಳೆಯು ಚಿಕಿತ್ಸೆ ಪಡೆಯುತ್ತಿದ್ದ ಪ್ರತ್ಯೇಕ ವಾರ್ಡ್ ಅನ್ನು ಆಪರೇಷನ್ ಥಿಯೇಟರ್ ಆಗಿ ಪರಿವರ್ತಿಸಲಾಗಿದ್ದು, ಈ ಬಗ್ಗೆ ನಿಗಾ ಇಡಲು 10 ವೈದ್ಯರ ವಿಶೇಷ ತಂಡವನ್ನು ನಿಯೋಜಿಸಲಾಗಿದೆ. 

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ವೈದ್ಯರು, 'ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಸಿ-ಸೆಕ್ಷನ್ ಮೂಲಕ ಒಂದು ವಾರದ ಮುಂಚೆಯೇ ಹೆರಿಗೆ ಮಾಡಲಾಗಿದೆ. ಪ್ರಸ್ತುತ, ಮಗುವನ್ನು ತಾಯಿಯೊಂದಿಗಿರಲು ಬಿಡಲಾಗಿದೆ. ಶಿಶುವಿಗೆ ಹಾಲುಣಿಸುವ ಅಗತ್ಯವಿರುತ್ತದೆ. ಇಲ್ಲಿಯವರೆಗೆ, ಸ್ತನ್ಯಪಾನದ ಮೂಲಕ ಕೊರೊನಾ ಸೋಂಕು ಹರಡಿದ ಬಗ್ಗೆ ಯಾವುದೇ ಪುರಾವೆಗಳಿಲ್ಲ' ಎಂದು ತಿಳಿಸಿದ್ದಾರೆ.

ಕೊರೊನಾ ಸೋಂಕು ಹೊಂದಿರುವ ಮಹಿಳೆಯರು ತೀರಾ ಅವಶ್ಯಕತೆ ಇದ್ದಲ್ಲಿ ತಮ್ಮ ಮಗುವಿಗೆ ಹಾಲುಣಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಮಾರ್ಗಸೂಚಿಯಲ್ಲಿ ಹೇಳಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು