ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ| ಭಾರತದಲ್ಲಿ 58 ಸಾವಿರ ವಿಮಾನ ಪ್ರಯಾಣಿಕರ ತಪಾಸಣೆ: ಇಬ್ಬರಲ್ಲಿ ರೋಗ ಪತ್ತೆ

Last Updated 2 ಫೆಬ್ರುವರಿ 2020, 15:54 IST
ಅಕ್ಷರ ಗಾತ್ರ

ನವದೆಹಲಿ: ಮಾರಕ ಕೊರೊನಾ ವೈರಸ್ ಭೀತಿ ವಿಶ್ವದ 25 ರಾಷ್ಟ್ರಗಳಲ್ಲಿ ಕಂಡುಬಂದಿದ್ದು ವಿದೇಶದಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳ ಪ್ರಯಾಣಿಕರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಇದುವರೆಗೆ 445 ವಿಮಾನಗಳಿಂದ ಬಂದಿಳಿದ 58,658 ಮಂದಿ ಪ್ರಯಾಣಿಕರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿದ್ದು, ಕೇವಲ ಇಬ್ಬರಲ್ಲಿ ಮಾತ್ರ ಕೊರೊನಾ ವೈರಸ್ ಪತ್ತೆಯಾಗಿದೆ. ಇದು ಕೇರಳದಲ್ಲಿ ಮಾತ್ರ ಕಂಡು ಬಂದಿದ್ದು ಆ ಇಬ್ಬರಿಗೆ ಎಲ್ಲಾ ರೀತಿಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ. 130 ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು, 128 ಮಂದಿಯಲ್ಲಿ ನೆಗೆಟಿವ್ ಎಂಬುದಾಗಿ ವರದಿಗಳು ಬಂದಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಚೀನಾದ ವುಹಾನ್‌‌ನಿಂದ ಎರಡನೇ ವಿಮಾನ 330 ಮಂದಿ ಪ್ರಯಾಣಿಕರನ್ನು ಭಾನುವಾರ ಕರೆತಂದಿದ್ದು, ಇವರಲ್ಲಿ ಏಳು ಮಂದಿ ಮಾಲ್ಡೀವ್ಸ್ ಪ್ರಜೆಗಳೂ ಸೇರಿದ್ದಾರೆ. ಇವರಲ್ಲಿ 300 ಮಂದಿಯನ್ನು ದೆಹಲಿಯ ಐಟಿಬಿಪಿ ಚಾವ್ಲಾ ಕ್ಯಾಂಪ್ ಮತ್ತು 30 ಮಂದಿಯನ್ನು ಭಾರತೀಯ ಸೇನೆಯ ಮನೆಸರ್ ಕ್ಯಾಂಪಿನಲ್ಲಿ ಇರಿಸಲಾಗಿದೆ. ಎಲ್ಲರನ್ನೂ ತೀವ್ರವಾಗಿ ಗಮನಿಸಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT