ಬುಧವಾರ, ಜುಲೈ 15, 2020
22 °C

ಮುಂಬೈ ಮತ್ತು ಪುಣೆಯಲ್ಲಿ ಲಾಕ್‍ಡೌನ್ ತೆರವು ಮಾಡಲು ಸಾಧ್ಯವಿಲ್ಲ: ಉದ್ಧವ್ ಠಾಕ್ರೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Uddav

ಮುಂಬೈ: ಮುಂಬೈ ಮತ್ತು ಪುಣೆಯಲ್ಲಿರುವ ಕೋವಿಡ್-19 ಕೆಂಪು ವಲಯಗಳಲ್ಲಿ ಲಾಕ್‍ಡೌನ್ ತೆರವು ಮಾಡುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಮಹಾರಾಷ್ಟ್ರ ಸಂಸ್ಥಾಪನಾ ದಿನದ ಅಂಗವಾಗಿ ಶುಕ್ರವಾರ ವೆಬ್‌ಕಾಸ್ಟ್ ಪ್ರಸಾರ ಮಾಡಿದ್ದಾರೆ ಉದ್ಥವ್. ಈ ವೇಳೆ ಮೇ 3ರ ನಂತರ ಏನು?ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಕೆಂಪು ವಲಯಗಳೆಂದು ಗುರುತಿಸಿರುವ ಮುಂಬೈ- ಪುಣೆ ಗಡಿಪ್ರದೇಶದಲ್ಲಿ, ನಾಗ್ಪುರ್‌ನ ಕೆಲವು ಪ್ರದೇಶ  ಮತ್ತು ಇನ್ನು ಕೆಲವು ಪ್ರದೇಶಗಳಲ್ಲಿ ಲಾಕ್‍ಡೌನ್ ತೆರವು ಮಾಡುವುದಿಲ್ಲ.

ಹಸಿರು ಮತ್ತು ಕಿತ್ತಳೆ ಬಣ್ಣದ ವಲಯದಲ್ಲಿ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ನಿಧಾನವಾಗಿ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಬಹುದು. ಆದರೆ ಮುಂಬೈ- ಪುಣೆಯಲ್ಲಿ  ಸಾಧ್ಯವಿಲ್ಲ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು