ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್: ಅಮೆರಿಕದಲ್ಲಿ 1 ಲಕ್ಷ ದಾಟಿದ ಸೋಂಕಿತರ ಸಂಖ್ಯೆ, ಭಾರತದಲ್ಲಿ 871

Last Updated 28 ಮಾರ್ಚ್ 2020, 6:55 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿಕೊರೊನಾ ವೈರಸ್ ಸೋಂಕು (ಕೋವಿಡ್–19) ತಗುಲಿರುವವರ ಸಂಖ್ಯೆಶನಿವಾರ ಬೆಳಿಗ್ಗೆ 871 ತಲುಪಿದ್ದು, ಅಮೆರಿಕದಲ್ಲಿ 1 ಲಕ್ಷ ದಾಟಿದೆ.

ಭಾರತದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಅಮೆರಿಕದಲ್ಲಿ ಸೋಂಕಿನಿಂದ1,704 ಮಂದಿ ಮೃತಪಟ್ಟಿದ್ದು,ನ್ಯೂಯಾರ್ಕ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರ, ಗುಜರಾತ್, ಶ್ರೀನಗರ ಮತ್ತು ಕರ್ನಾಟಕಗಳಲ್ಲಿ ಸೋಂಕಿನಿಂದ ಸಾವುಗಳು ಸಂಭವಿಸಿವೆ. ಗುಜರಾತ್‌ನಲ್ಲಿ ಶನಿವಾರ ಆರು ಹೊಸ ಪ್ರಕರಣ, ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಐದುಹೊಸ ಪ್ರಕರಣ ದೃಢಪಟ್ಟಿವೆ.

ಗುಜರಾತ್‌ನಲ್ಲಿ ಮೂರು ಕೋವಿಡ್–19 ಪ್ರಕರಣಗಳು ಶುಕ್ರವಾರದೃಢಪಟ್ಟಿದ್ದು, ಆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿತ್ತು. ಹೊಸ ಪ್ರಕರಣಗಳೆಲ್ಲ ರಾಜ್‌ಕೋಟ್‌ನಲ್ಲಿ ಕಂಡುಬಂದಿವೆ ಎಂದು ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಜಯಂತಿ ರವಿ ತಿಳಿಸಿದ್ದರು.

ತಮಿಳುನಾಡಿನ 9 ಮಂದಿಯಲ್ಲಿ ಹೊಸದಾಗಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ಅನೇಕ ವಲಸೆ ಕಾರ್ಮಿಕರು ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಮರಳುತ್ತಿರುವುದು ಮತ್ತು ಹೋಂ ಕ್ವಾರಂಟೈನ್ ಉಲ್ಲಂಘಿಸುತ್ತಿರುವುದು ಸೋಂಕು ಹರಡುವಿಕೆ ಭೀತಿ ಹೆಚ್ಚಲು ಕಾರಣವಾಗಿದೆ.

ಶುಕ್ರವಾರ ಒಂದೇ ದಿನ 140ಕ್ಕೂ ಹೆಚ್ಚು ಪ್ರಕರಣ

ಶುಕ್ರವಾರ ಒಂದೇ ದಿನ ದೇಶದಲ್ಲಿ 140ಕ್ಕೂ ಹೆಚ್ಚು ಕೋವಿಡ್–19 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆದರೆ, ಸರ್ಕಾರದ ಮಾಹಿತಿ ಪ್ರಕಾರ, ಶನಿವಾರ ಮುಂಜಾವ 3 ಗಂಟೆವರೆಗೆ 75 ಹೊಸ ಪ್ರಕರಣಗಳಷ್ಟೇ ದೃಢಪಟ್ಟಿವೆ.

ಒಟ್ಟಾರೆಯಾಗಿ ಶನಿವಾರದ ವೇಳೆಗೆ 66 ಜನ ಗುಣಮುಖರಾಗಿ ಮನೆಗೆ ಮರಳಿದ್ದು, 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT