ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ವಿಶ್ವದಾದ್ಯಂತ 26,455 ಜನರು ಸಾವು, 576,859 ಮಂದಿಗೆ ಸೋಂಕು

Last Updated 28 ಮಾರ್ಚ್ 2020, 3:10 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವದಾದ್ಯಂತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವಕೊರೊನಾ ವೈರಸ್ ಸೋಂಕಿನಿಂದಾಗಿ ಸಾವಿರಾರು ಜನರು ಈಗಾಗಲೇ ಮೃತಪಟ್ಟಿದ್ದು, ಲಕ್ಷಾಂತರ ಜನರುಸೋಂಕಿತರಾಗುತ್ತಿದ್ದಾರೆ. ಜಗತ್ತಿನಾದ್ಯಂತ ಇದುವರೆಗೂ 576,859 ಮಂದಿಗೆ ಸೋಂಕು ತಗುಲಿದ್ದು, 26,455 ಜನರು ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿ ಅಂಶಗಳು ತಿಳಿಸಿದೆ.

ಮಾರ್ಚ್ 26ರ ಮಧ್ಯರಾತ್ರಿಯಿಂದೀಚೆಗೆ 66,751 ಜನರಿಗೆ ಸೋಂಕು ತಗುಲಿದ್ದು, 5,10,108 ರಿಂದ 5,76,859ಕ್ಕೆ ಸೋಂಕಿತರ ಸಂಖ್ಯೆಯು ಜಾಸ್ತಿಯಾಗಿದೆ. ಈ ಮಧ್ಯೆ ಸಾವಿನ ಸಂಖ್ಯೆ ಕೂಡ 22,993 ರಿಂದ 26,455ಕ್ಕೆ ಏರಿಕೆಯಾಗಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ 3,462 ಜನರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ.

ಅಮೆರಿಕದಲ್ಲಿಯೇ 94,238 ಜನರಿಗೆ ಸೋಂಕು ತಗುಲಿದ್ದು, ಚೀನಾವನ್ನು ಹಿಂದಿಕ್ಕಿ ಸೋಂಕಿತ ಪ್ರಕರಣಗಳಲ್ಲಿ ಅಗ್ರಸ್ಥಾನದಲ್ಲಿದೆ. ಇಟಲಿಯಲ್ಲಿ ಮೃತಪಟ್ಟವರ ಸಂಖ್ಯೆ ಎಲ್ಲ ದೇಶಗಳಿಗಿಂತಲೂ ಅಧಿಕವಾಗಿದೆ. ಯೂರೋಪಿಯನ್ ರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 919 ಸಾವುಗಳು ಸಂಭವಿಸಿದ್ದು, ಒಟ್ಟಾರೆ 9,134 ಮಂದಿ ಮೃತಪಟ್ಟಿದ್ದಾರೆ.

2019ರ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಮೊಟ್ಟಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಸ್ ಸೋಂಕು 67 ದಿನಗಳಲ್ಲಿ 1 ಲಕ್ಷ ಜನರಿಗೆ ತಗುಲಿತ್ತು. ಆದರೆ ಮುಂದಿನ 11 ದಿನಗಳಲ್ಲಿಯೇ 1 ಲಕ್ಷ ಜನರು ಸೋಂಕಿತರಾಗಿದ್ದಾರೆ. ಇದೇ ವೈರಸ್ 3 ಲಕ್ಷ ಜನರನ್ನು ತಲುಪಲು ನಾಲ್ಕು ದಿನಗಳನ್ನು ತೆಗೆದುಕೊಂಡಿದ್ದು, 3 ರಿಂದ 4 ಲಕ್ಷ ಜನರನ್ನು ಆವರಿಸಲು ಕೇವಲ ಮೂರು ದಿನಗಳು ಮತ್ತು ಮುಂದಿನ ಎರಡು ದಿನಗಳಲ್ಲಿ 1 ಲಕ್ಷ ಮಂದಿಗೆ ಸೋಂಕು ತಗುಲಿದೆ. ದಿನದಿಂದ ದಿನಕ್ಕೆ ವೈರಸ್ ತನ್ನ ವೇಗವನ್ನು ಹೆಚ್ಚಿಸಿಕೊಂಡು ಜಾಸ್ತಿ ಪ್ರಮಾಣದ ಜನರನ್ನು ಆವರಿಸುತ್ತಿದೆ.

ಮುಂದಿನ ಕೆಲವು ದಿನಗಳಲ್ಲಿ ಇಟಲಿಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಜಾಸ್ತಿಯಾಗಬಹುದು ಎಂದು ಶುಕ್ರವಾರ ತಜ್ಞರು ಹೇಳಿದ್ದಾರೆ. ನಾಲ್ವರು ವೈದ್ಯರು ಮೃತಪಟ್ಟಿದ್ದು, ಬಿಕ್ಕಟ್ಟು ಇನ್ನಷ್ಟು ತಲೆದೋರಬಹುದೆಂದು ಪ್ರಾದೇಶಿಕ ಅಧಿಕಾರಿಗಳು ಎಚ್ಚರಿಸಿದ್ದಾರೆ. ರೋಗದ ಹರಡುವಿಕೆಯನ್ನು ತಡೆಯಲು ಕಠಿಣವಾದ ಲಾಕ್‌ಡೌನ್ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಐಎಸ್‌ಎಸ್) ತಿಳಿಸಿದೆ.

ಕೊರೊನಾ ವೈರಸ್‌‌ನಿಂದಾಗಿ ಸ್ಪೇನ್‌ನಲ್ಲಿ ಸಾವಿನ ಸಂಖ್ಯೆ ರಾತ್ರೋರಾತ್ರಿ ಏರಿಕೆಯಾಗಿದ್ದು, 769 ಜನರು ಮೃತಪಡುವ ಮೂಲಕ 4,858ಕ್ಕೆ ತಲುಪಿದೆ. ಆದರೆ ದಿನನಿತ್ಯದ ಸಾವಿನ ಸಂಖ್ಯೆಯಲ್ಲಿ ಸ್ಥಿರತೆ ಕಂಡುಬರುತ್ತಿದೆ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಶ್ವಾದಾದ್ಯಂತ ಸಂಭವಿಸುತ್ತಿರುವ ಸಾವಿನ ಸಂಖ್ಯೆಯಲ್ಲಿ ಇಟಲಿಯ ನಂತರ ಸ್ಪೇನ್ ಎರಡನೇ ಸ್ಥಾನದಲ್ಲಿದೆ.

ಹೊಸದಾಗಿ 300,000ಕ್ಕೂ ಹೆಚ್ಚು ಪ್ರಕರಣಗಳು ಯುರೋಪಿನಲ್ಲಿ ಬೆಳಕಿಗೆ ಬಂದಿದ್ದು, ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪ್ರಕರಣಗಳು ಇಟಲಿ ಮತ್ತು ಸ್ಪೇನ್‌ನಲ್ಲಿಯೇ ದಾಖಲಾಗಿದೆ. ಯುರೋಪಿನಲ್ಲಿ ಒಟ್ಟು 305,851 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, 18,289 ಜನರು ಸಾವಿಗೀಡಾಗಿದ್ದಾರೆ. 102,043 ಪ್ರಕರಣಗಳೊಂದಿಗೆ ಏಷ್ಯಾ ಎರಡನೇ ಸ್ಥಾನದಲ್ಲಿದ್ದು, 3,683 ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT