ಗುರುವಾರ , ಜನವರಿ 23, 2020
22 °C
ಪೌರತ್ವ ತಿದ್ದುಪಡಿ ಕಾಯ್ದೆ

ದೇಶಕ್ಕೀಗ ಸಂಕಷ್ಟದ ಕಾಲ: ಸಿಜೆಐ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ದೇಶ ಪ್ರಸ್ತುತ ಸಂಕಷ್ಟದ ಸಮಯ ಎದುರಿಸುತ್ತಿದೆ. ಸಾಕಷ್ಟು ಹಿಂಸೆ ನಡೆದಿವೆ. ಇಂತಹ ಸನ್ನಿವೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯು ಸಾಂವಿಧಾನಿಕವಾಗಿದೆ ಎಂದು ಘೋಷಿಸಬೇಕು ಎನ್ನುವ ಅರ್ಜಿಯ ತುರ್ತು ವಿಚಾರಣೆ ಕೈಗೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಅರ್ಜಿಯ ಉದ್ದೇಶ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ನೇತೃತ್ವದ ನ್ಯಾಯಪೀಠ, ‘ಕಾಯ್ದೆಯು ಸಾಂವಿಧಾನಿಕವಾಗಿದೆ ಎಂದು ಘೋಷಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿರುವುದು ಇದೇ ಮೊದಲು’ ಎಂದು ಅಭಿಪ್ರಾಯಪಟ್ಟಿತು.

‘ಕಾಯ್ದೆಗೆ ಸಂಬಂಧಿಸಿ ನಡೆಯುತ್ತಿರುವ ಹಿಂಸಾತ್ಮಕ ಬೆಳವಣಿಗಳು ಸ್ಥಗಿತಗೊಂಡ ಬಳಿಕವೇ ಕಾಯ್ದೆಯ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಲಾಗುವುದು’ ಎಂದು ನ್ಯಾಯ ಪೀಠವು ಸ್ಪಷ್ಟಪಡಿಸಿತು. 

‘ಕೋರ್ಟ್‌ನ ಕಾರ್ಯವು ಒಂದು ಕಾಯ್ದೆಯ ಕ್ರಮಬದ್ಧತೆಯನ್ನು ನಿರ್ಧರಿಸುವುದಾಗಿದೆ. ಅದು, ಸಾಂವಿಧಾನಿಕವಾಗಿದೆ ಎಂದು ಘೋಷಿಸುವುದಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಬೊಬಡೆ ಅವರು
ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಸಾಂವಿಧಾನಿಕವಾಗಿದೆ ಎಂದು ಘೋಷಿಸಬೇಕು ಹಾಗೂ ಇದರ ಜಾರಿಗೆ ರಾಜ್ಯಗಳಿಗೆ  ನಿರ್ದೇಶನ ನೀಡಬೇಕು ಎಂದು ಪುನೀತಾ ಕೌರ್ ಧಾಂಡಾ ಪರ ಸಲ್ಲಿಸಿದ್ದ ಅರ್ಜಿಯಲ್ಲಿ ವಕೀಲ ವಿನೀತ್‌ ಧಾಂಡಾ ಮನವಿ ಅವರು ಮಾಡಿದ್ದರು.

***

ಸಿಎಎಗೆ ಕಾಯ್ದೆಗೆ ಸಂಬಂಧಿಸಿ ಹಿಂಸಾಚಾರಗಳು ನಡೆಯುತ್ತಿವೆ. ದೇಶದಲ್ಲಿ ಈಗ ಸಂಕಷ್ಟದ ಕಾಲವಿದೆ. ಶಾಂತ ಪರಿಸ್ಥಿತಿಯನ್ನು ಸ್ಥಾಪಿಸಲು ಪ್ರಯತ್ನಿಸಬೇಕಾಗಿದೆ
-ಎಸ್‌.ಎ.ಬೊಬಡೆ, ಮುಖ್ಯನ್ಯಾಯಮೂರ್ತಿ, ಸುಪ್ರೀಂ ಕೋರ್ಟ್‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು